ADVERTISEMENT

ಹುಕ್ಕೇರಿ: ಬಕ್ರೀದ್ ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 15:03 IST
Last Updated 8 ಜೂನ್ 2024, 15:03 IST
ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದಲ್ಲಿ ಶನಿವಾರ ಉರುಸ್ ಮತ್ತು ಬಕ್ರೀದ್ ಅಂಗವಾಗಿ ಪಿಐ ಮಹಾದೇವ ಶಿರಹಟ್ಟಿ ನೇತೃತ್ವದಲ್ಲಿ ಶಾಂತಿಸಭೆ ಜರುಗಿತು
ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದಲ್ಲಿ ಶನಿವಾರ ಉರುಸ್ ಮತ್ತು ಬಕ್ರೀದ್ ಅಂಗವಾಗಿ ಪಿಐ ಮಹಾದೇವ ಶಿರಹಟ್ಟಿ ನೇತೃತ್ವದಲ್ಲಿ ಶಾಂತಿಸಭೆ ಜರುಗಿತು   

ಹುಕ್ಕೇರಿ: ಬಕ್ರೀದ್ ಹಾಗೂ ಅಕಾನಿಬಾಷಾ ಉರುಸ್ ಶಾಂತಿಪಾಲನಾ ಪೂರ್ವಭಾವಿ ಸಭೆ ಪಾಶ್ಚಾಪುರ ಗ್ರಾಮದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆಯಿತು.

ಯಮಕನಮರಡಿ ಪಿ.ಐ. ಮಹಾದೇವ ಶಿರಹಟ್ಟಿ, ಎ.ಎಸ್.ಐ. ಎಸ್.ಬಿ. ಮುರಗೋಡ, ಪೊಲೀಸ್ ಸಿಬ್ಬಂದಿ ಗ್ರಾಮಸ್ಥರ ಕುರಿತು ಚರ್ಚಿಸಿ, ಸಲಹೆ, ಸೂಚನೆ ನೀಡಿದರು.

ಪಾಶ್ಚಾಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ನಜೀರ ಮೊಮೀನ, ರಫೀಕ್ ಪೀರಜಾದೆ, ಅಣ್ಣಾಸಾಹೇಬ ಮಹಾಜನಶೆಟ್ಟಿ, ಅಮರ ಮಹಾಜನಶೆಟ್ಟಿ, ಹಯಾತಚಾಂದ ಸನದಿ, ಮಹೇಶ ಹೂಗಾರ, ಮಹಾಂತೇಶ ಉದೋಶಿ, ವಕೀಲ ಶಿವಲಿಂಗ ತೇಲಿ, ವಿಕ್ರಮ ಕುಡಜೋತಿ, ಮೀರಾಸಾಬ ಅತ್ತಾರ, ಆಸ್ಪಾಕ ದರ್ಗಾ, ಸೇರಿದಂತೆ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.