ADVERTISEMENT

ಬೆಳಗಾವಿ: ಪಾಸ್‌ಗೆ ಮುಗಿಬಿದ್ದ ಜನರು!

​ಪ್ರಜಾವಾಣಿ ವಾರ್ತೆ
Published 4 ಮೇ 2020, 14:48 IST
Last Updated 4 ಮೇ 2020, 14:48 IST
ಬೆಳಗಾವಿಯ ಡಿಸಿಪಿ ಕಚೇರಿ ಆವರಣದಲ್ಲಿ ಪಾಸ್ ಪಡೆಯಲು ಬಂದಿದ್ದ ಜನರಿಗೆ ಎಸಿಪಿ ಮಹಾಂತೇಶ ಜಿದ್ದಿ ಸೂಚನೆಗಳನ್ನು ನೀಡಿದರುಪ್ರಜಾವಾಣಿ ಚಿತ್ರ
ಬೆಳಗಾವಿಯ ಡಿಸಿಪಿ ಕಚೇರಿ ಆವರಣದಲ್ಲಿ ಪಾಸ್ ಪಡೆಯಲು ಬಂದಿದ್ದ ಜನರಿಗೆ ಎಸಿಪಿ ಮಹಾಂತೇಶ ಜಿದ್ದಿ ಸೂಚನೆಗಳನ್ನು ನೀಡಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ರಾಜ್ಯದ ಇತರ ಜಿಲ್ಲೆಗಳಿಗೆ ತೆರಳಲು ಬಯಸುವ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಇತರರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಿಸಿದ್ದರಿಂದ ಪಾಸ್‌ ಪಡೆಯಲು ಸೋಮವಾರ ಜನರು ಸರ್ಕಾರಿ ಕಚೇರಿಗಳಿಗೆ ಮುಗಿಬಿದ್ದರು.

‘ಜಿಲ್ಲೆಯಿಂದ ಇತರ ಜಿಲ್ಲೆಗಳಿಗೆ ಹೋಗಲು ಒಂದು ದಿನ ಮತ್ತು ಒಂದು ಬಾರಿ ಸಂಚಾರಕ್ಕೆ ಪಾಸ್ ನೀಡಲಾಗುವುದು. ಅಂತರ ಜಿಲ್ಲಾ ಪ್ರಯಾಣಕ್ಕೆ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕಿನ ಜನರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪಾಸ್‌ಗಳನ್ನು ನೀಡುವರು. ಅಂತೆಯೇ ರೀತಿ ಬೆಳಗಾವಿ ನಗರ ಮತ್ತು ತಾಲ್ಲೂಕಿನ ಪ್ರದೇಶದಲ್ಲಿರುವ ಜನರಿಗೆ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಪಾಸ್ ಕೊಡಲಿದ್ದಾರೆ’ ಎಂದು ತಿಳಿಸಲಾಗಿತ್ತು. ಹೀಗಾಗಿ, ಈ ಕಚೇರಿಗಳಿಗೆ ಜನರು ಬಂದಿದ್ದರು.

ನಗರ ಹಾಗೂ ತಾಲ್ಲೂಕಿನ ನೂರಾರು ಜನರು ಡಿಸಿಪಿ ಕಚೇರಿಗೆ ಬಂದಿದ್ದರು. ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ಅಧಿಕಾರಿಗಳು ತಿಳಿಸಿಕೊಟ್ಟರು.

ADVERTISEMENT

ಅರ್ಜಿ ಸಲ್ಲಿಸಲು ಅಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಹುತೇಕ ಮಂದಿ ಮಾಸ್ಕ್ ಧರಿಸಿಕೊಂಡೆ ಬಂದಿದ್ದರು. ಆದರೆ, ಅಂತರ ಕಾಯ್ದುಕೊಂಡಿಲ್ಲದಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.