ADVERTISEMENT

ಕ್ಷೇತ್ರದ ಜನರಲ್ಲೇ ದೇವರು ಕಾಣುತ್ತಿದ್ದೇನೆ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 12:57 IST
Last Updated 16 ಜನವರಿ 2021, 12:57 IST
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಗವಿಕಲರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತ್ರಿಚಕ್ರವಾಹನಗಳನ್ನು ಶನಿವಾರ ವಿತರಿಸಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಗವಿಕಲರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತ್ರಿಚಕ್ರವಾಹನಗಳನ್ನು ಶನಿವಾರ ವಿತರಿಸಿದರು   

ಬೆಳಗಾವಿ: ‘ಜನರ ಸೇವೆಯಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅವರಲ್ಲೇ ದೇವರನ್ನು ಕಾಣುತ್ತಿದ್ದೇನೆ’ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಕ್ಷೇತ್ರದ 15 ಮಂದಿ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.

‘ಬಹಳಷ್ಟು ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದರು. ಅವರೆಲ್ಲ ನನ್ನ ಬಳಿ ಬಂದು ಮನವಿ ಮಾಡಿಕೊಂಡಿದ್ದರು. ಹಾಗಾಗಿ ವಿಶೇಷ ಪ್ರಯತ್ನ ಮಾಡಿ ಸರ್ಕಾರದಿಂದ ಯೋಜನೆಯ ಲಾಭ ಕೊಡಿಸುತ್ತಿದ್ದೇನೆ. ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಅವರ ಸಂತೋಷದಲ್ಲಿ ನಾನೂ ಸಂತಸ ಕಾಣುತ್ತಿದ್ದೇನೆ’ ಎಂದರು.

ADVERTISEMENT

‘ಕ್ಷೇತ್ರದ ಜನರ ಮನೆ ಮಗಳಾಗಿ ಪಕ್ಷಾತೀತವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅಂಗವಿಕಲರಿಗೆ ವಿಶೇಷ ಪ್ರಾಧ್ಯಾನ್ಯತೆ ನೀಡವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅವರನ್ನು ಗೌರವಿಸಿದರೆ ಭಗವಂತನ ಕೃಪಾಶೀರ್ವಾದ ಸದಾಕಾಲವೂ ಇರುತ್ತದೆ ಎನ್ನುವುದು ನನ್ನ ನಂಬಿಕೆಯಾಗಿದೆ’ ಎಂದು ಹೇಳಿದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ 2018-19 ಹಾಗೂ 2019-20ರ ಅರ್ಜಿಗಳನ್ನು ಪರಿಗಣಿಸಿ 15 ಫಲಾನಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ.

ಮುಖಂಡರಾದ ಸಿ.ಸಿ. ಪಾಟೀಲ, ಯುವರಾಜ ಕದಂ, ಬಾಗಣ್ಣ ನರೋಟಿ, ಬಾಳು ಪಾಟೀಲ, ಚಂದ್ರು ಬೆಳಗಾಂವಕರ, ನಾರಾಯಣ ಜಾಧವ, ಮಹೇಶ ಸುಗ್ನಣ್ಣವರ, ನಿಲೇಶ ಚಂದಗಡ್ಕರ್, ಸಾತೇರಿ ಬೆಳವತ್ಕರ, ಬಸವರಾಜ ಮ್ಯಾಗೋಟಿ, ಚನ್ನರಾಜ ಹಟ್ಟಿಹೊಳಿ, ಬಸನಗೌಡ ರುದ್ರಗೌಡ ಪಾಟೀಲ, ರಾಮನಗೌಡ ಪಾಟೀಲ, ಮಹೇಶ ಕೋಲಕಾರ, ಉಮೇಶ ಪಾಟೀಲ, ದತ್ತ ಪಾಟೀಲ, ವಿಜಯ ಪಾವಸೆ, ಅನಿಲ ಪಾವಸೆ, ದೇವರಾಜ ಕೋಲಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.