
ಬಂಧನ
ಗೋಕಾಕ: ಯಾವುದೇ ಅಗತ್ಯ ಪರವಾನಿಗೆ ಹೊಂದಿರದೇ ಎಲ್ಲಿಂದಲೋ ತಂದಿದ್ದ ಸಾರಾಯಿ ಪೌಚಗಳನ್ನು ಅಕ್ರಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಾಲ್ಲೂಕಿನ ಚಿಕ್ಕನಂದಿ-ಕ್ರಾಸ್ ಬಳಿ ಪೊಲೀಸರು ಈಚೆಗೆ ಬಂಧಿಸಿದ್ದಾರೆ.
ತಾಲ್ಲೂಕಿನ ಹಿರೇನಂದಿ ಗ್ರಾಮದ ನಾಗಪ್ಪ ಲಕ್ಷ್ಮಣ ಹಾಲಪ್ಪಗೋಳ ಬಂಧಿತ ಆರೋಪಿ. ಆಪಾದಿತನ ವಿರುದ್ಧ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕಾಕ: ಕೊಣ್ಣೂರ ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದ ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರನ್ನು ಓಸಿ-ಜೂಜಾಟದಲ್ಲಿ ನಿರತವಾಗುವಂತೆ ಪುಸಲಾಯಿಸಿ, ಅವರಿಂದ ಹಣವನ್ನು ಪಡೆದು, ಚೀಟಿಗಳ ಮೇಲೆ ಅಂಕಿ-ಸಂಖ್ಯೆ ಬರೆಯುತ್ತ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಗೋಕಾಕ ಗ್ರಾಮೀಣ ಪೊಲೀಸರು ಈಚೆಗೆ ಬಂಧಿಸಿದ್ದು, ಬಂಧಿತನಿಂದ ₹300 ಜಪ್ತಿ ಮಾಡಿಕೊಂಡಿದ್ದಾರೆ. ಕೊಣ್ಣೂರಿನ ಮಲ್ಲಿಕಾರ್ಜುನ ಬ. ಚಿನಗುಡಿ ಬಂಧಿತ ಆರೋಪಿ.
ಘಟಪ್ರಭಾ (ಗೋಕಾಕ): ಯಾದವಾಡ-ಸಂಗನಕೇರಿ ರಸ್ತೆಯ ಹುಣಶ್ಯಾಳ ಪಿಜಿ ಗ್ರಾಮ ವ್ಯಾಪ್ತಿಯ ಸತೀಶ ಸ್ಟೀಲ್ ಕಾರ್ಖಾನೆ ಬಳಿ ಲಾರಿ–ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ತಾಲ್ಲೂಕಿನ ಬೀರನಗಡ್ಡಿ ನಿವಾಸಿ ಪೀರಸಾಬ ಮಹ್ಮದಸಾಬ ನದಾಫ್ ಗಾಯಾಳು. ಈ ಕುರಿತು ಗಾಯಾಳುವಿನ ಪತ್ನಿ ಬಿಸಾಬಿ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಘಟಪ್ರಭಾ ಠಾಣೆ ಪೊಲೀಸರು ಆಪಾದಿತ ಲಾರಿ ಚಾಲಕ ನಿಪ್ಪಾಣಿಯ ಪ್ರತೀಕ ಪರಶುರಾಮ ಭೋಸಲೆ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.