ಪರಮಾನಂದವಾಡಿ: ಗ್ರಾಮದ ವಿವಿಧೆಡೆ 75ನೇ ಸ್ವಾತಂತ್ರ್ಯ ದಿನವನ್ನು ಸಂಘ ಸಂಸ್ಥೆ ಮತ್ತು ಶಾಲಾ– ಕಾಲೇಜುಗಳಲ್ಲಿ ಕೋವಿಡ್ ಕಾರಣದಿಂದ ಸರಳವಾಗಿ ಆಚರಿಸಲಾಯಿತು.
ಭುವನೇಶ್ವರಿ ವಿವಿಧ ಉದ್ದೇಶಗಳ ಸೊಸೈಟಿಯಲ್ಲಿ ಮೌಲಾಲಿ ಮುಲ್ಲಾ ಪೂಜೆ, ಶಾಂತಿನಾಥ ಚಂಡಕೆ ಧ್ವಜಾರೋಹಣ ನೆರವೇರಿಸಿದರು. ಶಿವ ಬಸವ ಕೃಪ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಲಿಂಗರಾಜ ಚಿಟ್ಟಿ ಪೂಜಿಸಿದರು. ಬಿ.ಎಸ್. ಮೂಡಲಗಿ ಧ್ವಜಾರೋಹಣ ಮಾಡಿದರು.
ಗುರುದೇವ ಬ್ರಹ್ಮಾನಂದ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಡಶಾಲೆ ರಾಜು ಗಾಯಕವಾಡ ಪೂಜೆ, ಬಿ.ಎಂ. ವಾಳಕೆ ಧ್ವಜಾರೋಹಣ ನೆರವೇರಿಸಿದರು. ಮಹಾಕಾಳಿ ಶಿಕ್ಷಣ ಸಂಸ್ಥೆಯ ಗುರುದೇವ ಬ್ರಹ್ಮಾನಂದ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಬಿ.ಎಂ.ಕಾಂಬಳೆ ಪೂಜೆ ಮತ್ತು ಎಸ್.ಎಲ್. ಬಾಂಡಿ ಧ್ವಜಾರೋಹಣ ಮಾಡಿದರು.
ಕನಕದಾಸ ಕೋ-ಆಪ್ ಅರ್ಬನ್ ಸೊಸೈಟಿಯಲ್ಲಿ ಬಿಬನಸಾಬ ರಾಜಾಪೂರೆ ಪೂಜೆ ಸಲ್ಲಿಸಿದರೆ, ಸಿದ್ದು ದಳವಾಯಿ ಧ್ವಜಾರೋಹಣ ನೆರವೇರಿಸಿದರು. ಮಹಾಲಕ್ಷ್ಮಿ ಸಹಕಾರ ಕ್ರೆಡಿಟ್ ಸೊಸೈಟಿಯಲ್ಲಿ ಮಲ್ಲಿಕಾರ್ಜುನ ಪಾಲಭಾವಿ ಪೂಜೆ ಮತ್ತು ದಸ್ತಗೀರ ಕಾಗವಾಡೆ ಧ್ವಜಾರೋಹಣ ಮಾಡಿದರು.
ಗುರುದೇವ ಸಿದ್ದೇಶ್ವರ ದಿವ್ಯಜೀವನ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಅಣ್ಣಾಸಾಬ ಸಸಾಲಟ್ಟಿ ಪೂಜಿಸಿದರು. ಸದಾಶಿವ ದಳವಾಯಿ ಧ್ವಜಾರೋಹಣ ಮಾಡಿದರು. ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಸಿದ್ರಾಮ್ ಖಿಲಾರೆ ಮತ್ತು ಡಾ.ಸಚಿನ ಸೌಂದಲಗಿ ಕ್ರಮವಾಗಿ ಫೋಟೊ ಪೂಜೆ ಮತ್ತು ಧ್ವಜಾರೋಹಣ ನೆರವೇರಿಸಿದರು. ಎಸ್.ಆರ್. ದಳವಾಯಿ ಸಂಯುಕ್ತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಎ.ಎಲ್. ಶಿರಹಟ್ಟಿ ಪೂಜೆ ಸಲ್ಲಿಸಿದರು. ಆರ್.ಎಸ್. ಕಂಬಾರ ಧ್ವಜಾರೋಹಣ ಮಾಡಿದರು.
ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮಮದಲ್ಲಿ ಶ್ರೀಕಾಂತ ವಾಳಕೆ ಪೂಜೆ ನೆರವೇರಿಸಿದರು. ಸುಭಾಷ ಡವಳೆ ಧ್ವಜಾರೋಹಣ ಮಾಡಿದರು. ಮಹಾಲಕ್ಷ್ಮಿ ಪಿ.ಕೆ.ಪಿ.ಎಸ್.ನಲ್ಲಿ ಬಿ.ಆರ್. ಬಂಡಗಾರ ಪೂಜೆ ಮಾಡಿದರೆ, ವಿವೇಕಾನಂದ ಪಾಲಭಾವಿ ಧ್ವಜಾರೋಹಣ ನೆರವೇರಿಸಿದರು.
ನವೋದಯ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ವಿವೇಕಾನಂದ ಬಸ್ತವಾಡೆ ಪೂಜೆ ಮಾಡಿದರು. ಜಿನೇಂದ್ರ ಮೂಡಲಗಿ ಧ್ವಜಾರೋಹಣ ನೆರವೇರಿಸಿದರು. ಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿಯಲ್ಲಿ ಸಿದ್ದು ದುಪದಾಳ ಪೂಜೆ ಮತ್ತು ಸುನೀಲಗೌಡ ಪಾಟೀಲ ಧ್ವಜಾರೋಹಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮಹಾಂತೇಶ ವಾಳಕೆ ಪೂಜೆ, ಅನಿಲ ಅಕ್ಕೋಳೆ ಧ್ವಜಾರೋಹಣ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.