ADVERTISEMENT

ಮಹಾರಾಷ್ಟ್ರದ ಇಂದ್ರಯಾಣಿ ಸೇತುವೆ ಕುಸಿತ: ನಸಲಾಪೂರ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 16:04 IST
Last Updated 16 ಜೂನ್ 2025, 16:04 IST
<div class="paragraphs"><p>ಮಹಾರಾಷ್ಟ್ರದ ಪುಣೆಯ ಇಂದ್ರಯಾಣಿ ಸೇತುವೆ ಕುಸಿತದಿಂದಾಗಿ ಮೃತಪಟ್ಟ ಚೇತನ ಚಾವರೆ ಭಾವಚಿತ್ರ.</p></div>

ಮಹಾರಾಷ್ಟ್ರದ ಪುಣೆಯ ಇಂದ್ರಯಾಣಿ ಸೇತುವೆ ಕುಸಿತದಿಂದಾಗಿ ಮೃತಪಟ್ಟ ಚೇತನ ಚಾವರೆ ಭಾವಚಿತ್ರ.

   

ರಾಯಬಾಗ: ಮಹಾರಾಷ್ಟ್ರ ರಾಜ್ಯದ ಪುಣೆಯ ಮಾವಲ್‌ ತಾಲ್ಲೂಕಿನ ಕುಂದಾಮಲ ಬಳಿ ಇಂದ್ರಾಯಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಭಾನುವಾರ ಮಧ್ಯಾಹ್ನ ಕುಸಿದಿದ್ದು, ದುರಂತದಲ್ಲಿ ತಾಲ್ಲೂಕಿನ ನಸಲಾಪುರ ಗ್ರಾಮದ ಯುವಕ ಚೇತನ ಚಾವರೆ (22) ಮೃತಪಟ್ಟಿದ್ದಾರೆ.

ಇವರು ಪುಣೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಭಾನುವಾರ ಬೆಳಿಗ್ಗೆ ಸ್ನೇಹಿತರೊಂದಿಗೆ ಇಂದ್ರಯಾಣಿ ಸೇತುವೆ ನೋಡಲು ಹೋಗಿದ್ದರು. ಈ ವೇಳೆ ಸೇತುವೆ ಕುಸಿದು ಚೇತನ ಕೊಚ್ಚಿ ಹೋಗಿದ್ದರು. ಭಾನುವಾರವೇ ಶವ ಪತ್ತೆಯಾಗಿತ್ತು. ಸೋಮವಾರ ಸ್ವಗ್ರಾಮ ಜಲಾಲಪುರ ಗ್ರಾಮದಲ್ಲಿ ಶವ ಸಂಸ್ಕಾರ ಕಾರ್ಯ ನೆರವೇರಿತು. ಚೇತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.