ADVERTISEMENT

ಬೆಳಗಾವಿ: ಆಭರಣ ಮಳಿಗೆಗಳು, ಮಾಲೀಕರ ಮನೆಗಳ ಮೇಲೆ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 7:26 IST
Last Updated 8 ನವೆಂಬರ್ 2021, 7:26 IST
ಬೆಳಗಾವಿಯ ಖಡೇಬಜಾರ್‌ನಲ್ಲಿರುವ ಪೋತದಾರ್ ಜ್ಯುವೆಲರ್ಸ್ ಮಳಿಗೆ
ಬೆಳಗಾವಿಯ ಖಡೇಬಜಾರ್‌ನಲ್ಲಿರುವ ಪೋತದಾರ್ ಜ್ಯುವೆಲರ್ಸ್ ಮಳಿಗೆ   

ಬೆಳಗಾವಿ: ಜಿಲ್ಲೆಯ ‌ವಿವಿಧ ಆಭರಣ ಮಳಿಗೆಗಳು ಹಾಗೂ ಅವುಗಳ ಮಾಲೀಕರ ಮನೆಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಏಕಕಾಲಕ್ಕೆ ಸೋಮವಾರ ದಾಳಿ ನಡೆಸಿದ್ದಾರೆ.

ಬೆಳಗಾವಿಯ ಖಡೇಬಜಾರ್‌ನಲ್ಲಿರುವ ಪೋತದಾರ್ ಜ್ಯುವೆಲರ್ಸ್ ಮಳಿಗೆ ಮೇಲೆ ಹಾಗೂ ಅದರ ಮಾಲೀಕ ಅನಿಲ ಪೋತದಾರ ಅವರ ಜಾಧವ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಗೋಕಾಕದ ಬಾಪ್ನಾ ಸಹೋದರರಿಗೆ ಸೇರಿದ ಮಳಿಗೆ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ವಿಜಯ ಬಾಪ್ನಾ ಹಾಗೂ ಪುರುಷೋತ್ತಮ ಬಾಪ್ನಾ ಅವರ ಮನೆಗಳು ಹಾಗೂ ಅಂಗಡಿಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಗೋವಾ ಹಾಗೂ ಬೆಳಗಾವಿಯ ಐಟಿ ಅಧಿಕಾರಿಗಳು ಪ್ರಕ್ರಿಯೆ ನಡೆಸುತ್ತಿದ್ದಾರೆ. ತೆರಿಗೆ ವಂಚನೆ ಮಾಹಿತಿ ಆಧರಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.