ADVERTISEMENT

ಐನಾಪೂರದಲ್ಲಿ ಜೈನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 30 ಮೇ 2025, 13:53 IST
Last Updated 30 ಮೇ 2025, 13:53 IST
ರಾಯಬಾಗ ಪಟ್ಟಣದ ಮಹಾವೀರ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ.ಸಿ.ಸದಲಗಿ ಹಾಗೂ ಇತರರು ಸಮಾವೇಶದ ಪ್ರಚಾರ ಭೀತಿ ಪತ್ರ ಬಿಡುಗಡೆ ಮಾಡಿದರು.
ರಾಯಬಾಗ ಪಟ್ಟಣದ ಮಹಾವೀರ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ.ಸಿ.ಸದಲಗಿ ಹಾಗೂ ಇತರರು ಸಮಾವೇಶದ ಪ್ರಚಾರ ಭೀತಿ ಪತ್ರ ಬಿಡುಗಡೆ ಮಾಡಿದರು.   

ರಾಯಬಾಗ: ಜೈನ ಸಮುದಾಯದ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಕಾಗವಾಡ ತಾಲ್ನೂಕಿನ ಐನಾಪೂರದಲ್ಲಿ ಜೂ.8 ರಂದು ಆಚಾರ್ಯ ಗುಣಧರ ನಂದಿ ಮುನಿಮಹಾರಾಜರ ನೇತೃತ್ವದಲ್ಲಿ ಜೈನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅರಿಹಂತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಿ.ಸಿ.ಸದಲಗಿ ಹೇಳಿದರು.

ಗುರುವಾರ ಪಟ್ಟಣದ ಮಹಾವೀರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ ಸಮುದಾಯದ ಅಭಿವೃದ್ಧಿಗಾಗಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆ, ಜೈನ ದಿಗಂಬರ ಮುನಿಗಳಿಗೆ ರಕ್ಷಣೆ ಒದಗಿಸುವುದು ಹಾಗೂ ಇತರ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಬೃಹತ್‌ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಸಮಾವೇಶಕ್ಕೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಭಟ್ಟಾರಕರು ಆಗಮಿಸಲಿದ್ದು, ಸಮಾವೇಶ ಯಶಸ್ವಿಗೊಳಿಸಲು ಜೈನ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿಕೊಂಡರು.

ADVERTISEMENT

ಮುಖಂಡರಾದ ದಶರಥ ಶೆಟ್ಟಿ, ಶೀತಲ ಬೇಡಕಿಹಾಳೆ, ಧೂಳಗೌಡ ಪಾಟೀಲ, ಸಂಜಯ ಬಡೋರೆ, ಪಾರೀಶ ಉಗಾರೆ, ನೇಮಿನಾಥ ಅಸ್ಕಿ, ಧನಪಾಲ ಅಲಗೊಂಡ, ಅಣ್ಣಾಸಾಬ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.