ADVERTISEMENT

‘ಕೋವ್ಯಾಕ್ಸಿನ್’ ಟ್ರಯಲ್: 3ನೇ ಹಂತ ಆರಂಭ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 15:31 IST
Last Updated 3 ನವೆಂಬರ್ 2020, 15:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಇಲ್ಲಿನ ಜೀವನ್‌ರೇಖಾ ಆಸ್ಪತ್ರೆಯು ‘ಕೋವ್ಯಾಕ್ಸಿನ್’ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ ಆರಂಭಿಸಿದೆ. ಕೋವಿಡ್–19 ಚಿಕಿತ್ಸೆಗಾಗಿ ಹೈದರಾಬಾದ್‌ನ ಭಾರತ್ ಬಯೊಟೆಕ್ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಸಾವಿರ ಜನರ ಮೇಲೆ ಟ್ರಯಲ್ ನಡೆಸಲು ಉದ್ದೇಶಿಸಲಾಗಿದೆ.

‘ಈ ಹಂತದಲ್ಲಿ ಸ್ಥಳೀಯ ಸ್ವಯಂಸೇವಕರಿಗೆ ಆದ್ಯತೆ ನೀಡಲಾಗುವುದು. ಇದರಿಂದ ಕಾಲಕಾಲಕ್ಕೆ ವರದಿ ಪಡೆಯಲು, ರಕ್ತದ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲು ಮತ್ತು ರೋಗನಿರೋಧಕ ಪರೀಕ್ಷೆ ನಡೆಸಲು ಸುಲಭವಾಗಲಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾತೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಾಗೂ 2ನೇ ಹಂತದ ಟ್ರಯಲ್‌ನಲ್ಲಿ ಕೆಲವು ಸ್ವಯಂಸೇವಕರು ಹೊರ ಜಿಲ್ಲೆಗಳವರೂ ಇದ್ದರು. ಇದರಿಂದಾಗಿ ಕೆಲವು ಪರೀಕ್ಷೆಗಳ ಸಂದರ್ಭದಲ್ಲಿ ತೊಡಕಾಯಿತು. ಅವರು ಸಕಾಲಕ್ಕೆ ಬರುವುದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, 3ನೇ ಹಂತದಲ್ಲಿ ಸ್ಥಳೀಯರನ್ನು ಟ್ರಯಲ್‌ಗೆ ಒಳಪಡಿಸಲಾಗುವುದು. ದೇಶದಾದ್ಯಂತ ಈ ಹಂತದಲ್ಲಿ 25 ಕೇಂದ್ರಗಳ 28 ಸಾವಿರ ಮಂದಿಯನ್ನು ಒಳಪಡಿಸಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮೊದಲ ಹಾಗೂ 2ನೇ ಹಂತದ ಟ್ರಯಲ್‌ ಮಾರ್ಗಸೂಚಿಗಳ ಪ್ರಕಾರ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.