ಅಥಣಿ(ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಚಿನ್ನಾಭರಣ ಮಾರಾಟ ಅಂಗಡಿಗೆ ಮಂಗಳವಾರ ಇಬ್ಬರು ಕಳ್ಳರು ನುಗ್ಗಿ, ಪಿಸ್ತೂಲ್ ತೋರಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಆದರೆ, ಮಾಲೀಕ ತಕ್ಷಣವೇ ಪ್ರತಿರೋಧ ತೋರಿದ್ದರಿಂದ ಪರಾರಿಯಾಗಿದ್ದಾರೆ.
ಮಹೇಶ ಪೋತದಾರ ಅವರಿಗೆ ಸೇರಿದ ಚಿನ್ನಾಭರಣ ಮಾರಾಟದ ಅಂಗಡಿಯನ್ನು ಇಬ್ಬರು ಕಳ್ಳರು ಪ್ರವೇಶಿಸಿದರು. ಈ ಪೈಕಿ ಒಬ್ಬ ಹೆಲ್ಮೆಟ್ ಧರಿಸಿದ್ದ. ಪಿಸ್ತೂಲ್ ತೋರಿಸಿ ಚಿನ್ನಾಭರಣ ನೀಡುವಂತೆ ಒತ್ತಾಯಿಸಿದ ಕಳ್ಳರು, ಕಳ್ಳತನಕ್ಕೆ ಯತ್ನಿಸಿದರು.
ಆಗ ಮಾಲೀಕ ಧೈರ್ಯದಿಂದ ಕಳ್ಳರನ್ನು ಎದುರಿಸಿದರು. ಜೋರಾಗಿ ಕಿರುಚಿದರು. ಸುತ್ತಲಿನ ಜನ ಸೇರುತ್ತಾರೆ ಎಂಬ ಭಯದಿಂದ ಕಳ್ಳರು ಪರಾರಿಯಾದರು. ಈ ದೃಶ್ಯಾವಳಿ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.