ADVERTISEMENT

ಅಂಗವಿಕಲರಿಗೆ ವಿಶೇಷ ಉದ್ಯೋಗ ಮೇಳ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 12:26 IST
Last Updated 26 ಏಪ್ರಿಲ್ 2022, 12:26 IST
ಬೆಳಗಾವಿಯಲ್ಲಿ ಅಂಗವಿಕಲರಿಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸಂದರ್ಶನ ಪ್ರಕ್ರಿಯೆ ನಡೆಯಿತು
ಬೆಳಗಾವಿಯಲ್ಲಿ ಅಂಗವಿಕಲರಿಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸಂದರ್ಶನ ಪ್ರಕ್ರಿಯೆ ನಡೆಯಿತು   

ಬೆಳಗಾವಿ: ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ಇಲ್ಲಿನ ನಾಥ ಪೈ ವೃತ್ತ ಸಮೀಪದ ಅಳ್ವಾನಗಲ್ಲಿಯ ಎಪಿಎಚ್‌ (ಅಂಗವಿಕಲರ ಸಂಸ್ಥೆ) ಆವರಣದಲ್ಲಿ ಅಂಗವಿಕಲರಿಗೆ ಆಯೋಜಿಸಿದ್ದ ವಿಶೇಷ ಉದ್ಯೋಗ ಮೇಳ ಯಶಸ್ವಿಯಾಗಿ ನಡೆಯಿತು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷ ಸಂಜಯ ಬೆಳಗಾಂವಕರ ಉದ್ಘಾಟಿಸಿದರು. ನಂತರ ಮಾತನಾಡಿ, ‘ಅಂಗವಿಕಲರಿಗೆ ಅವಕಾಶ ಕಲ್ಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇಂತಹ ಮೇಳಗಳು ಪೂರಕವಾಗಿವೆ’ ಎಂದು ಹೇಳಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ನಿರ್ದೇಶಕ ವೀರೇಶ ಜಿ.ಕಿವಡಸಣ್ಣವರ, ಮಹೇಶ್ವರಿ ಅಂಧರ ಶಾಲೆ ಮುಖ್ಯಸ್ಥ ಚಂದ್ರಕಾಂತ ಬೆಂಬಳಗಿ, ಉದ್ಯಮಿ ಮಹಾಂತೇಶ ಪಾಟೀಲ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಉದಯಕುಮಾರ ಬಾಗುನವರ, ಎಪಿಎಚ್‌ ನಿರ್ದೇಶಕ ರಾಘವೇಂದ್ರ ಅಣ್ವೇಕರ, ಕಾರ್ಯದರ್ಶಿ ಗಿರೀಶ ಸವಾಸೇರಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.

ADVERTISEMENT

300 ಮಂದಿ ಸಂದರ್ಶನದಲ್ಲಿ ಪಾಲ್ಗೊಂಡರು. 20 ಕಂಪನಿಗಳು ಭಾಗವಹಿಸಿದ್ದವು. 50 ಅಭ್ಯರ್ಥಿಗಳು ಆಯ್ಕೆಯಾದರು. 150 ಅಭ್ಯರ್ಥಿಗಳು ವಿವಿಧ ವಲಯಗಳಲ್ಲಿ ಅಂತಿಮ ಸುತ್ತು ತಲುಪಿದರು.

ಯೂತ್‌ ಫಾರ್ ಸೇವಾ ಬೆಳಗಾವಿ ಸಂಯೋಜಕ ಸಂತೋಷಖೋತ ಹಾಗೂ ಸ್ವಯಂಸೇವಕರು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.