
ಕಬ್ಬೂರ: ‘ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆ, ಕಾರ್ಖಾನೆಗಳಿಗೆ ಸರಾಗವಾಗಿ ಸಾಗಿಸಲು ರಸ್ತೆಗಳ ಅಗತ್ಯವಿದ್ದ ಕಾರಣ, ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗಿದೆ’ ಎಂದು ರಾಯಬಾಗ ಶಾಸಕ ಧುರ್ಯೋದನ ಐಹೊಳೆ ಹೇಳಿದರು.
ಇಲ್ಲಿನ ಜೋಡಟ್ಟಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜೈನರಕೋಡಿ ವರೆಗಿನ ಜಿಲ್ಲಾ ಪಂಚಾಯಿತಿಯ ₹50 ಲಕ್ಷ ಅನುದಾನದಲ್ಲಿ ಕೈಗೆತ್ತಿಕೊಂಡ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ರೈತರು ರಸ್ತೆ ಕಾಮಗಾರಿಗೆ ಸಹಕರಿಸಿ ಗುಣಮಟ್ಟದ ರಸ್ತೆಯನ್ನು ಮುಂದೆ ನಿಂತು ಮಾಡಿಕೊಳ್ಳಬೇಕು’ ಎಂದರು.
ಪೋಗತ್ಯಾನಟ್ಟಿಯ ಸರ್ಕಾರಿ ಶಾಲೆಯಿಂದ ಬಾಗೇವಾಡಿ ಹಳ್ಳದವರೆಗಿನ ರಸ್ತೆಗೆ ಜಿಲ್ಲಾ ಪಂಚಾಯಿತಿಯ ಅನುದಾನ ₹30 ಲಕ್ಷ ವೆಚ್ಚದ ಕಾಮಗಾರಿಗೂ ಅವರು ಇದೇ ವೇಳೆ ಚಾಲನೆ ನೀಡಿದರು.
ಸಂಕೇಶ್ವರ ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಮಹಾಂತೇಶ ಶಿರಗೂರ, ಕಲ್ಲಪ್ಪ ಕರಗಾಂವಿ, ಮಲ್ಲಪ್ಪ ರಂಗಾಪೂರೆ, ಉಮೇಶ ಬೆಲ್ಲದ, ಸಂಜು ಕೋಟಬಾಗಿ, ಶಿವಾನಂದ ಪಾಟೀಲ, ಬಸವರಾಜ ಅರಕೇರಿ, ನವಲಪ್ಪ ಶಿರಗಪ್ಪಗೋಳ, ಶಿವಾನಂದ ಗುಡಚಿ, ಕಿರಣ ಗುಡಸಿದ್ದನವರ, ಶಿವಗೌಡ ರುದ್ರಣ್ಣವರ, ಶಿವರಾಯಿ ಕಮತೆ, ನಿಂಗಪ್ಪ ಹಾದಿಮನಿ, ಹನುಮಂತ ಅರಕೇರಿ, ಭೀಮಪ್ಪ ಜೋಡಟ್ಟಿ, ಶೆಟ್ಟೆಪ್ಪ ಗುರಸಿದ್ದನವರ, ವೀರಭದ್ರ ಗುಡಸ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.