ADVERTISEMENT

ಕಬ್ಬೂರ | ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ: ಮಹೇಶ ಬೆಲ್ಲದ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:17 IST
Last Updated 2 ಫೆಬ್ರುವರಿ 2026, 5:17 IST
ಕಬ್ಬೂರಿನ ಶ್ರೀ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ, ಎ.ಐ ತಂತ್ರಜ್ಞಾನ ಆಧಾರಿತ 50 ಇಂಟರಾಕ್ಟಿವ್ ಬೋರ್ಡ್‌ಗಳನ್ನು ಉದ್ಯಮಿ ಮಹೇಶ ಬೆಲ್ಲದ ಶನಿವಾರ ವಿತರಿಸಿದರು
ಕಬ್ಬೂರಿನ ಶ್ರೀ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ, ಎ.ಐ ತಂತ್ರಜ್ಞಾನ ಆಧಾರಿತ 50 ಇಂಟರಾಕ್ಟಿವ್ ಬೋರ್ಡ್‌ಗಳನ್ನು ಉದ್ಯಮಿ ಮಹೇಶ ಬೆಲ್ಲದ ಶನಿವಾರ ವಿತರಿಸಿದರು   

ಕಬ್ಬೂರ: ‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಗ್ರಾಮೀಣ ಮಕ್ಕಳು ಮುಂದೆ ಬರಬೇಕು’ ಎಂದು ಶಿಕ್ಷಣ ಪ್ರೇಮಿ, ಉದ್ಯಮಿ ಮಹೇಶ ಬೆಲ್ಲದ ಹೇಳಿದರು.

ಪಟ್ಟಣದ ಶ್ರೀ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ 4ನೇ ಕಂತಿನ ಉಚಿತ ಎ.ಐ ತಂತ್ರಜ್ಞಾನ ಆಧಾರಿತ 50 ಇಂಟರಾಕ್ಟಿವ್ ಬೋರ್ಡ್ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

‘ಅಮೆರಿಕದಲ್ಲಿ ನಮ್ಮ ಕಂಪನಿಯ ಮೂರು ಘಟಕಗಳನ್ನು ಶೀಘ್ರದಲ್ಲಿ ಆರಂಭಿಸಲಿದ್ದೇವೆ. ವಿವಿಧ ದೇಶಗಳ ನಮ್ಮ ಕಂಪನಿಯ ಬ್ರಾಂಚುಗಳಲ್ಲಿ ನಮ್ಮ ಭಾಗದ ಯುವಕರನ್ನೇ ಕಂಪನಿಯ ಮುಖ್ಯಸ್ಥರನ್ನಾಗಿ ಮಾಡುತ್ತಿದ್ದೇವೆ’ ಎಂದರು.

ADVERTISEMENT

ಅತಿಥಿಗಳಾಗಿ ಆಗಮಿಸಿದ್ದ ಚಿಕ್ಕೋಡಿಯ ಹೃದಯ ತಜ್ಞ ಶ್ರೀಧರ ಕುಲಕರ್ಣಿ ಮಾತನಾಡಿ, ‘50 ಸರ್ಕಾರಿ ಶಾಲೆಗಳನ್ನು ದತ್ತು ಪಡೆದದ್ದು, ಮಹೇಶ ಬೆಲ್ಲದ ಅವರ ಕಾರ್ಯ ಸಾಮಾನ್ಯ ಕೆಲಸವಲ್ಲ. ನಾವು ಕಲಿತು ಬೆಳೆದ ಸ್ವ ಗ್ರಾಮಕ್ಕೆ ನೀಡುವ ದಾನ ಶ್ರೇಷ್ಠ ದಾನವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಇದೇ ಸಂದರ್ಭದಲ್ಲಿ ಬೆಲ್ಲದ ನಗರ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಲ್ಲದ ಕುಟುಂಬದವರು ಭೂದಾನ ಪತ್ರ ವಿತರಿಸಿದರು.

ಇನ್ನೊರ್ವ ಅತಿಥಿ ಘಟಪ್ರಭಾ ಕೆ.ಎಚ್.ಐ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸ್ವಾತಿ, ಚಿಕ್ಕೋಡಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ರೇವತಿ ಮಠದ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಭಾವತಿ ಪಾಟೀಲ, ಪಿ.ಬಿ. ಹಿರೇಮಠ, ಆರ್.ಬಸವರಾಜ, ಅಥಣಿ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಿವು ಹಂಜಿ, ಪ್ರಾಚಾರ್ಯ ಮಹೇಂದ್ರ ಕೆ.ಆರ್. ಮಾತನಾಡಿದರು. 

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ ಬೆಲ್ಲದ, ಸಂಕೇಶ್ವರ ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ದಿ. ಕಬ್ಬೂರ ಅರ್ಬನ್ ಕೋ- ಆಫ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ರಮೇಶ ಬೆಲ್ಲದ, ಅಶೋಕ ಬುರ್ಲಿ, ವಿಜಯ ಬುರ್ಲಿ, ಮಹೇಶ ಗೋಜಗೋಜಿ, ಮಂಜು ಪಾಟೀಲ, ಕಬ್ಬೂರ ಸಿ.ಆರ್.ಪಿ ಕಾಡಪ್ಪ ಮಾಳ್ಯಾಗೋಳ ಕಾಡೇಶಗೋಳ, ಶಿವು ಚೌಗಲಾ, ಮಲ್ಲಿಕಾರ್ಜುನ ಪಾಟೀಲ ಪಾಲ್ಗೊಂಡರು.

ರಾಜು ಮಹಿಪತಿ ಸ್ವಾಗತಿಸಿದರು. ಸಿದ್ದಪ್ಪ ಮುರಚಿಟ್ಟಿ ವಂದಿಸಿದರು. ಗೋಪಾಲ ಜಿ.ಪತ್ತಾರ ಅವರು ಮಹೇಶ ಬೆಲ್ಲದ ಅವರ ಕೈಬರಹದ ಭಾವಚಿತ್ರ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.