ADVERTISEMENT

ಕಾಗವಾಡ | ಗಣೇಶೋತ್ಸವ: ಪೋಲಿಸ್ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 6:51 IST
Last Updated 29 ಆಗಸ್ಟ್ 2025, 6:51 IST
ಕಾಗವಾಡ ಪಟ್ಟಣದಲ್ಲಿ ಗಣೇಶೋತ್ಸವ ನಿಮಿತ್ತ ಪ್ರಮುಖ ರಸ್ತೆಗಳಲ್ಲಿ ಪೋಲಿಸರು ಪಥ ಸಂಚಲನ ನಡೆಸಿದರು.
ಕಾಗವಾಡ ಪಟ್ಟಣದಲ್ಲಿ ಗಣೇಶೋತ್ಸವ ನಿಮಿತ್ತ ಪ್ರಮುಖ ರಸ್ತೆಗಳಲ್ಲಿ ಪೋಲಿಸರು ಪಥ ಸಂಚಲನ ನಡೆಸಿದರು.   

ಕಾಗವಾಡ: ಪಟ್ಟಣದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ ಶಾಂತಿ ಹಾಗೂ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಕಾಗವಾಡ ಪೊಲೀಸರು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.

ಗುರುವಾರ ಕಾಗವಾಡ ಹಾಗೂ ಐನಾಪೂರ ಪಟ್ಟಣದ ವಿವಿಧ ಭಾಗದ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನವನ್ನು ಪಿಎಸ್ಐ ರಾಘವೇಂದ್ರ ಖೋತ ಅವರ ನೇತೃತ್ವದಲ್ಲಿ 50 ಪೋಲಿಸರು ಹಾಗೂ ಹೋಮಂ ಗಾರ್ಡ್ ಕ್ಕೂ ಹೆಚ್ಚು ಸಿಬ್ಬಂದಿ ಪಥಸಂಚಲನ ನಡೆಸಿದರು.

ಪಿಎಸ್ಐ ರಾಘವೇಂದ್ರ ಖೋತ ಗಣೇಶನ ವಿಸರ್ಜನೆ ಸಮಯದಲ್ಲಿ ಕರ್ಕಷ ಶಬ್ದ ಮಾಡುವ ಡಿಜೆ, ಡಾಲ್ಬಿಗಳನ್ನು ಹಚ್ಚುವುದನ್ನು ಸರ್ಕಾರ ಸಂಪೂರ್ಣ ನಿಷೇದಿಸಿದೆ. ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿಕೊಳ್ಳಬಹುದು. ಮದ್ಯ ಸೇವನೆ ಮಾಡಿ, ಗಲಭೆಗೆ ಅವಕಾಶ ಮಾಡುವಂತವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಭಾವೈಕ್ಯತೆಯಿಂದ ಎರಡೂ ಹಬ್ಬಗಳನ್ನು ಆಚರಿಸಲು ಇಲಾಖೆ ಜೊತೆಗೆ ಸಹಕರಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT