ADVERTISEMENT

ಬೆಳಗಾವಿ ನಗರ ಪಾಲಿಕೆ ಆವರಣದಲ್ಲಿ ಹಾರಿಸಿದ್ದ ಕನ್ನಡ ಧ್ವಜ ತೆರವು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 8:17 IST
Last Updated 1 ನವೆಂಬರ್ 2020, 8:17 IST
ಬೆಳಗಾವಿ ನಗರಪಾಲಿಕೆ (ಸಾಂದರ್ಭಿಕ ಚಿತ್ರ)
ಬೆಳಗಾವಿ ನಗರಪಾಲಿಕೆ (ಸಾಂದರ್ಭಿಕ ಚಿತ್ರ)   

ಬೆಳಗಾವಿ: ಇಲ್ಲಿನ ನಗರಪಾಲಿಕೆ ಆವರಣದಲ್ಲಿ ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ನೇತೃತ್ವದಲ್ಲಿ ಕೆಲವು ಯುವಕರು ಭಾನುವಾರ ಮಧ್ಯರಾತ್ರಿ ಹಾರಿಸಿದ್ದ ಕನ್ನಡ ಬಾವುಟವನ್ನು ಪೊಲೀಸರು ತಕ್ಷಣ ತೆರವುಗೊಳಿಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕನ್ನಡ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪ್ರಭಾವದಿಂದಾಗಿ ಪಾಲಿಕೆಯಲ್ಲಿ ಕನ್ನಡ ಧ್ವಜ ಇಲ್ಲ. ಅಲ್ಲಿ ಕನ್ನಡ ಧ್ವಜ ಹಾರಿಸುವುದಕ್ಕಾಗಿ ಕಸ್ತೂರಿ ಅನೇಕ ವರ್ಷಗಳಿಂದ ಶಪಥ ಮಾಡಿದ್ದರು. ಅಲ್ಲಿವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ರಾಜ್ಯೋತ್ಸವದ ಅಂಗವಾಗಿ ಮದ್ಯರಾತ್ರಿ ಧ್ವಜ ತಂದು ಹಾರಿಸಿದ್ದಾರೆ. ಇದೇ‌ ಮೊದಲ ಬಾರಿಗೆ ಪಾಲಿಕೆಯಲ್ಲಿ ‌ಕನ್ನಡ ಧ್ವಜ ಹಾರಾಡಿದೆ.

ತೆರವುಗೊಳಿಸಿದ ಪೊಲೀಸರ ಕ್ರಮ ಖಂಡಿಸಿ ಕಸ್ತೂರಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಬಳಿಕ ಪೊಲೀಸರನ್ನು ಅವರನ್ನು ಅಲ್ಲಿಂದ ಕಳುಹಿಸಿದರು ಎಂದು ತಿಳಿದುಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.