ಚಿಕ್ಕೋಡಿ: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕು ವ್ಯಾಪ್ತಿಯ ವಿವಿಧ ಪಟ್ಟಣ ಗ್ರಾಮಗಳಲ್ಲಿ ಕನ್ನಡ ಉಳಿಸಿ, ಬೆಳೆಸಲು ಕರವೇ ಪದಾಧಿಕಾರಿಗಳು ಪಣ ತೊಡಬೇಕು ಎಂದು ಬೆಳಗಾವಿ ಜಿಲ್ಲಾ ಕರವೇ ಸಂಘಟನೆಯ ಉಪಾಧ್ಯಕ್ಷ ಗಣೇಶ ರೋಖಡೆ ಹೇಳಿದರು.
ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿಕ್ಕೋಡಿ ತಾಲ್ಲೂಕುಮಟ್ಟದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕು ವ್ಯಾಪ್ತಿ, ಹೋಬಳಿ ಮಟ್ಟದಲ್ಲಿ ಕರವೇ ಸಂಘಟನೆಯ ಘಟಕಗಳನ್ನು ನಿರ್ಮಿಸಿ ಸ್ಥಳೀಯ ಸಮಸ್ಯೆಗಳ ನಿವಾರಣೆ, ಕನ್ನಡ ಉಳಿಸಲು ಬೆಳೆಸಲು ವಿವಿಧ ಹಂತಗಳ ಹೋರಾಟ ಮಾಡಬೇಕು ಎಂದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ‘ಕನ್ನಡ ನಾಡು ನುಡಿ, ನೆಲ ಜಲಕ್ಕಾಗಿ ಪ್ರಾಮಾಣಿಕವಾಗಿ ನಾವೆಲ್ಲರೂ ಹೋರಾಟ ಮಾಡಿ ಗಡಿ ಭಾಗದಲ್ಲಿ ಕನ್ನಡ ನಾಡನ್ನು ಕಟ್ಟುವೆ ಕೆಲಸ ಮಾಡಬೇಕು’ ಎಂದು ಹೇಳಿದರು.
ಚಂದ್ರಕಾಂತ ಹುಕ್ಕೇರಿ, ಶಂಕರ ಅವಡಖಾನ, ಕೃಷ್ಣಾ ಖಾನಪ್ಪನವರ, ಸಂತೋಷ ಪೂಜಾರಿ, ಪ್ರತಾಪ ಪಾಟೀಲ, ಪ್ರಕಾಶ ಲಮಾಣಿ, ಬಸವರಾಜ ಅವರೋಳಿ, ಸಂಜು ಲಠ್ಠೆ, ಅಮೂಲ ನಾವಿ, ಸಂಜು ಹಿರೇಮಠ, ರಫೀಕ ಪಠಾಣ, ಚನ್ನಪ್ಪ ಬಡಿಗೇರ, ಸಚಿನ ದೊಡ್ಡಮನಿ, ಶಿವು ಮದಾಳಿ, ಮಾಳು ಕರೆನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.