ADVERTISEMENT

ಬಾನಾಡಿಯಂತೆ ಹಾರಿದವು ಆಕಾಶಬುಟ್ಟಿಗಳು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 16:47 IST
Last Updated 3 ನವೆಂಬರ್ 2023, 16:47 IST
ಮೂಡಲಗಿಯಲ್ಲಿ ರಾಜ್ಯೋತ್ಸವ ಅಂಗವಾಗಿ ಎಸ್‌ಎಸ್‌ಆರ್ ಕಾಲೇಜು ಮೈದಾನದಲ್ಲಿ ಅತಿಥಿಗಳು ಗಾಳಿಪಟ ಹಾರಿಸಿದರು. 
ಮೂಡಲಗಿಯಲ್ಲಿ ರಾಜ್ಯೋತ್ಸವ ಅಂಗವಾಗಿ ಎಸ್‌ಎಸ್‌ಆರ್ ಕಾಲೇಜು ಮೈದಾನದಲ್ಲಿ ಅತಿಥಿಗಳು ಗಾಳಿಪಟ ಹಾರಿಸಿದರು.    

ಮೂಡಲಗಿ: ಮೂಡಲಗಿಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮ–50 ವರ್ಷಾಚರಣೆಯ ಅಂಗವಾಗಿ ಪಟ್ಟಣದಲ್ಲಿಯ ತಾಲ್ಲೂಕು ಆಡಳಿತದ ಕಚೇರಿಗಳು, ಕಲ್ಮೇಶ್ವರ ವೃತ್ತ, ಪುರಸಭೆ ಕಾರ್ಯಾಲಗಳೆಲ್ಲ ಬಣ್ಣ, ಬಣ್ಣದ ದೀಪಾಲಂಕರದಿಂದ ಝಗಮಗಿಸಿ ಎಲ್ಲ ಕಣ್ಮನ ಸೆಳೆದವು. ಅದರೊಂದಿಗೆ ಎಸ್‌ಎಸ್‌ಆರ್ ಮೈದಾನದಲ್ಲಿ ಬಣ್ಣದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ಗಾಳಿಪಟಗಳು ಮುಗಿಲತ್ತ ಹಾರುತ್ತಿದ್ದಂತೆ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ಕಲ್ಮೇಶ್ವರ ವೃತ್ತದಲ್ಲಿ ಮುಸ್ಸಂಜೆ ಹೊತ್ತಲ್ಲಿ ಆಕಾಶ ಬುಟ್ಟಿಗಳನ್ನು ಮುಗಿಲಿಗೆ ಹಾರಿಬಿಟ್ಟರು. ದೀಪ ಹೊತ್ತ ಆಕಾಶಬುಟ್ಟಿಗಳು ಆಕಾಶಲ್ಲಿ ಮಂದ ಕತ್ತಲಲ್ಲಿ ತೇಲಿ ಹೋಗುತ್ತಿದ್ದಂತೆ ಸೇರಿದ ನೂರಾರು ಜನರ ಮೊಗದಲ್ಲಿ ಮಂದಹಾಸದ ನಗು. ಆಕಾಶದಲ್ಲಿ ಒಂದರ ಹಿಂದೆ ಒಂದರಂತೆ ಬಾನಾಡಿಗಳಂತೆ ನೂರಾರು ಆಕಾಶ ಬುಟ್ಟಿಗಳ ಕಲರವ ಎಲ್ಲರ ಖುಷಿ ಉಡಾಯಿಸಿತು. ಎಲ್ಲರೂ ಕೇ,ಕೇ, ಚಪ್ಪಾಳೆ ತಟ್ಟಿ ಆನಂದಿಸಿದರು.

ರಾಜ್ಯೋತ್ಸವಕ್ಕಾಗಿ ಮೂಡಲಗಿ ತಾಲ್ಲೂಕಾ ಆಡಳಿತ, ಮೂಡಲಗಿ ಶಿಕ್ಷಣ ಸಂಸ್ಥೆ, ನವಜೀವನ ಸೇವಾ ಸಂಸ್ಥೆ, ಕಾರ್ಯನಿರತ ಪತ್ರಕರ್ತರ ಸಂಘದವರು ಗಾಳಿಪಟ ಮತ್ತು ಆಕಾಶ ಬುಟ್ಟಿ ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ADVERTISEMENT

ಸರ್ವೋತ್ತಮ ಜಾರಕಿಹೊಳಿ ಮತ್ತು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಗಾಳಿಪಟವನ್ನು ಹಾರಿ ಬಿಡುವ ಮೂಲಕ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದರು.

ತಹಶೀಲ್ದಾರ್ ಶಿವಾನಂದ ಬಬಲಿ, ತಾಲ್ಲೂಕು ಪಂಚಾಯ್ತಿ ಇಓ ಎಫ್‌.ಎಸ್. ಚಿನ್ನನ್ನವರ, ಬಿಇಒ ಅಜೀತ ಮನ್ನಿಕೇರಿ, ಆರ್.ಪಿ. ಸೋನವಾಲಕರ, ಈಶ್ವರ ಕಂಕಣವಾಡಿ, ವೆಂಕಟೇಶ ಸೋನವಾಲಕರ, ಲಕ್ಷ್ಮಣ ಅಡಿಹುಡಿ, ಕೃಷ್ಣಾ ಗಿರೆಣ್ಣವರ, ಓ ಸಂತೋಷ, ಮಲ್ಲು ಬೋಳನ್ನವರ, ವಿ.ಎಚ್. ಬಾಲರಡ್ಡಿ ಮತ್ತಿತರರು ಇದ್ದರು.

ಮೂಡಲಗಿಯಲ್ಲಿ ರಾಜ್ಯೋತ್ಸವ ಅಂಗವಾಗಿ ಹಾರಿಸಿದ ಆಕಾಶಬುಟ್ಟಿಗಳ ಸಂಭ್ರಮ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.