ADVERTISEMENT

₹500 ಕೊಟ್ಟು ಜನರನ್ನು ಕರೆದುಕೊಂಡು ಬರಬೇಕು: ವಿಡಿಯೊದಲ್ಲಿ ಸಿದ್ದರಾಮಯ್ಯ ಮಾತು

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಟ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 12:56 IST
Last Updated 2 ಮಾರ್ಚ್ 2023, 12:56 IST
ಬೆಳಗಾವಿಯಲ್ಲಿ ಬುಧವಾರ ಸಂಚರಿಸಿದ ಕಾಂಗ್ರೆಸ್‌ ‘ಪ್ರಜಾಧ್ವನಿ’ ಯಾತ್ರೆಯ ವಾಹನದಲ್ಲಿ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಚರ್ಚೆಯಲ್ಲಿ ತೊಡಗಿದ್ದರು
ಬೆಳಗಾವಿಯಲ್ಲಿ ಬುಧವಾರ ಸಂಚರಿಸಿದ ಕಾಂಗ್ರೆಸ್‌ ‘ಪ್ರಜಾಧ್ವನಿ’ ಯಾತ್ರೆಯ ವಾಹನದಲ್ಲಿ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಚರ್ಚೆಯಲ್ಲಿ ತೊಡಗಿದ್ದರು   

ಬೆಳಗಾವಿ: ‘ಪ್ರತಿಯೊಬ್ಬರಿಗೂ ಐನೂರು ರೂಪಾಯಿ ಕೊಟ್ಟು ಕರಕೊಂಡು ಬರಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಐನೂರು ರೂಪಾಯಿ ಯಾರಿಗೆ– ಯಾರು ಕೊಟ್ಟು ಕರಕೊಂಡು ಬರಬೇಕು ಎಂಬ ಬಗ್ಗೆ ಅವರ ಮಾತಲ್ಲಿ ಸ್ಪಷ್ಟತೆ ಇಲ್ಲ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂತ ಬಾಳೇಕುಂದ್ರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್‌ ‘ಪ್ರಜಾಧ್ವನಿ’ ಯಾತ್ರೆಗೆ ಆಗಮಿಸುವ ವೇಳೆ, ಬಸ್‌ನಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರೂ ಚರ್ಚೆಯಲ್ಲಿ ತೊಡಗಿದ್ದಾರೆ.

‘ಎಲೆಕ್ಷನ್‌ ಇರುವ ಕಾರಣ ಅವರು ಕೂಡ ಜನರನ್ನು ಸೇರಸ್ತಾರೆ. ಅಲ್ಲಿ ಒಂದೇ ಕ್ಷೇತ್ರದವರು ಇರಲ್ಲ. ಬೇರೆಬೇರೆ ಕ್ಷೇತ್ರದವರೂ ಇರುತ್ತಾರೆ. ಐನೂರು ರೂಪಾಯಿ ಕೊಟ್ಟು ಪ್ರತಿಯೊಬ್ಬರನ್ನೂ ಕರಕೊಂಡು ಬರಬೇಕು...’ ಎಂದು ಸಿದ್ದರಾಮಯ್ಯ ಹೇಳಿದ ಮಾತುಗಳು ವಿಡಿಯೊದಲ್ಲಿವೆ.

ADVERTISEMENT

ಈ ಬಗ್ಗೆ ಬೆಳಗಾವಿಯಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಅವರು (ಕಾಂಗ್ರೆಸ್‌ನವರು) ಮೊದಲಿನಿಂದಲೂ ಅದನ್ನೇ ಮಾಡಿಕೊಂಡು ಬಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.