ADVERTISEMENT

ಪ್ರವಾಹ: 60,366 ಜಾನುವಾರುಗಳಿಗೆ ಆಶ್ರಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 13:27 IST
Last Updated 16 ಆಗಸ್ಟ್ 2019, 13:27 IST
   

ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಬಾಧಿತವಾಗಿರುವ 60,366 ಜಾನುವಾರಗಳಿಗೆ ಆಶ್ರಯ ಒದಗಿಸಲಾಗಿದೆ ಎಂದುಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಅಶೋಕ ಎಲ್. ಹೊಳ್ಳ ತಿಳಿಸಿದ್ದಾರೆ.

‘ಚಿಕ್ಕೋಡಿಯಲ್ಲಿ 28, ಅಥಣಿ–37, ಹುಕ್ಕೇರಿ– 18, ಗೋಕಾಕ– 76, ರಾಯಬಾಗ–13, ರಾಮದುರ್ಗ ತಾಲ್ಲೂಕಿನಲ್ಲಿ 4 ಸೇರಿ 176 ಜಾನುವಾರು ಶಿಬಿರಗಳನ್ನು ತೆರೆಯಲಾಗಿದೆ.

ಅಲ್ಲಿ ಮೇವು, ನೀರು ಪೂರೈಕೆ ಮಾಡಲಾಗುತ್ತಿದೆ. ನಿಯಮಿತವಾಗಿ ಪಶುವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ. ಜಿಲ್ಲೆಯ ಜಾನುವಾರುಗಳಿಗೆ ರೋಗ ಉಲ್ಬಣವಾಗದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕಾ ಕಾರ್ಯ ಕೈಗೊಳ್ಳಲಾಗಿದೆ. ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.