
ಗೋಕಾಕ: ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ ಅವರಂತೆಯೇ ನಮ್ಮ ಚಿಕ್ಕಪ್ಪ ಪುನೀತರಾಜಕುಮಾರ ಅವರ ಕೊಡುಗೆ ಅಪಾರವಾಗಿದೆ. ಗೋಕಾಕ ಚಳವಳಿಯ ಸಂದರ್ಭ ಹಾಗೂ ಇತರೆ ಸಂದರ್ಭದಲ್ಲಿ ಗೋಕಾಕ ನಗರಕ್ಕೆ ರಾಜಕುಮಾರ ಒಡನಾಟ ನೆನೆದು ನಟ ವಿನಯರಾಜಕುಮಾರ್ ಭಾವುಕರಾದರು.
ನಗರದ ಲಕ್ಷ್ಮೀ ಚಿತ್ರಮಂದಿರ ಎದುರು ಕರ್ನಾಟಕ ರತ್ನ ಪುನೀತ ರಾಜಕುಮಾರ ವೃತ್ತದಲ್ಲಿ ಅವರ ಅಭಿಮಾನಿ ಬಳಗದಿಂದ ನೂತನವಾಗಿ ನಿರ್ಮಿಸಲಾದ ಪುನೀತ ರಾಜಕುಮಾರ ಅವರ ಪುತ್ಥಳಿಯನ್ನು ಭಾನುವಾರ ಸಂಜೆ ಅನಾವರಣಗೊಳಿಸಿ ಮಾತನಾಡಿದ ಅವರು, ಈ ಹಿಂದೆ ನಮ್ಮ ತಾತ ರಾಜಕುಮಾರ ಅವರೊಂದಿಗೆ ಒಂದು ವರ್ಷದ ಮಗುವಿದ್ದಾಗ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಗೋಕಾಕಕ್ಕೆ ಆಗಮಿಸಿದ್ದೆ. ಈಗ ಮತ್ತೆ ಗೋಕಾಕ ನಗರಕ್ಕೆ ಬರುವ ಭಾಗ್ಯ ಒದಗಿ ಬಂದಿದೆ ಎಂದರು.
ಇದಕ್ಕೂ ಮುಂಚೆ ನಗರದಲ್ಲಿ ನಟ ವಿನಯರಾಜಕುಮಾರ್ ಅವರನ್ನು ಬೈಕ್ ರ‍್ಯಾಲಿಯ ಮೂಲಕ ಪುನೀತರಾಜಕುಮಾರ್ ಅಭಿಮಾನಿಗಳು ವೇದಿಕೆಗೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಉದ್ಘಾಟಿಸಿದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ, ಯುವನಾಯಕ ಸರ್ವೋತ್ತಮ ಜಾರಕಿಹೊಳಿ, ಮುಖಂಡರಾದ ಬಸವರಾಜ ಕಲ್ಯಾಣಶೆಟ್ಟಿ, ಜಾವೇದ ಗೋಕಾಕ, ಇಸ್ಮಾಯಿಲ್ ಗೋಕಾಕ, ರಾಮಣ್ಣ ತಳ್ಳಿ, ಭೀಮಶಿ ಭರಮಣ್ಣವರ, ಸಂಜು ಚಿಪ್ಪಲಕಟ್ಟಿ, ಶಂಕರ ಅಂಕದವರ, ಶಶಿ ಕನ್ನಪ್ಪನವರ, ರಮೇಶ ಮಾದರ, ಭಗವಂತ ಹುಳ್ಳಿ, ನೀಲಕಂಠ ಕಪ್ಪಲಗುದ್ದಿ, ಪ್ರಕಾಶ ತಳ್ಳಿ, ರಮೇಶ ಬಡೆಪ್ಪಗೋಳ, ಕರ್ನಾಟಕ ರತ್ನ ಪುನೀತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ಅಪ್ಪು ಬಡೆಪ್ಪಗೋಳ, ಉಪಾಧ್ಯಕ್ಷ ಗೋವಿಂದ ವಡ್ಡರ ಸೇರಿದಂತೆ ಸ್ಥಳಿಯ ಕಲಾವಿದರು, ಸಾವಿರಾರು ಅಪ್ಪು ಅಭಿಮಾನಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.