ADVERTISEMENT

ಬೆಳಗಾವಿ: ಕೆ–ಸಿಇಟಿ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಮೇ 2025, 13:15 IST
Last Updated 26 ಮೇ 2025, 13:15 IST
ಬೆಳಗಾವಿಯ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಬೆಳಗಾವಿಯ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಬೆಳಗಾವಿ: ಇಲ್ಲಿನ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಚೈತನ್ಯ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದು, ಎಂಜಿನಿಯರಿಂಗ್‌ ವಿಭಾಗದಲ್ಲಿ 108ನೇ ರ್‍ಯಾಂಕ್‌ ಗಳಿಸಿದ ರಾಯೇಶ್ವರ ಅಣ್ವೇಕರ, ಬಿ.ಎಸ್ಸಿ ಕೃಷಿ ವಿಭಾಗದಲ್ಲಿ 1,085ನೇ ರ್‍ಯಾಂಕ್‌ ಗಳಿಸಿದ ಅಕ್ಷಯ ಮೊಖಾಶಿ, 1,509ನೇ ರ್‍ಯಾಂಕ್‌ ಗಳಿಸಿದ ಸೃಷ್ಟಿ ಮಾಳಿ, ಪಶು ವೈದ್ಯಕೀಯ ವಿಜ್ಞಾನದಲ್ಲಿ 1,067ನೇ ರ್‍ಯಾಂಕ್‌ ಗಳಿಸಿದ ಹರ್ಷಿತಾ ಚುಂಚನೂರಮಠ,  ಬಿ.ಎಸ್ಸಿ ನರ್ಸಿಂಗ್‌ನಲ್ಲಿ 4,853ನೇ ರ್‍ಯಾಂಕ್‌ ಗಳಿಸಿದ ಭೂಮಿ ಸೂರಾಪಲ್ಲಿ ಅವರನ್ನು ಸತ್ಕರಿಸಲಾಯಿತು. 

ಚೈತನ್ಯ ಶಿಕ್ಷಣ ಸಂಸ್ಥೆಯ ಬೆಳಗಾವಿ ಎಜಿಎಂ ಕೆ.ಮಹೇಶ, ಚೇರ್ಮನ್‌ ವಿಶಾಲ ಕಳಸನ್ನವರ, ಪ್ರಾಚಾರ್ಯ ಯುಗಂಧರ್, ಗಣಪತಿ ಭಟ್‌ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.