ADVERTISEMENT

ಬೆಳಗಾವಿ| ದ್ವಿಶತಮಾನೋತ್ಸವ: ನಿರ್ಮಾಣವಾಗದ ಸ್ಮಾರಕ, ಚನ್ನಮ್ಮನ ಅಭಿಮಾನಿಗಳ ಬೇಸರ

ಇಮಾಮ್‌ಹುಸೇನ್‌ ಗೂಡುನವರ
Published 14 ಅಕ್ಟೋಬರ್ 2025, 2:37 IST
Last Updated 14 ಅಕ್ಟೋಬರ್ 2025, 2:37 IST
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಳೆದ ವರ್ಷ ಜರುಗಿದ ಐತಿಹಾಸಿಕ ಕಿತ್ತೂರು ಉತ್ಸವದ ದ್ವಿಶತಮಾನೋತ್ಸವದ ಸವಿನೆನಪಿಗಾಗಿ ಈವರೆಗೆ ಸ್ಮಾರಕ ಅಥವಾ ಸ್ತಂಭ ಸಹ ನಿರ್ಮಿಸದಿರುವುದು ಚನ್ನಮ್ಮನ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಬ್ರಿಟಿಷರ ವಿರುದ್ಧ ವೀರರಾಣಿ ಚನ್ನಮ್ಮ ತನ್ನ ಸೈನ್ಯದೊಂದಿಗೆ ಹೋರಾಡಿ, ವಿಜಯ ಸಾಧಿಸಿದ್ದರ ಐತಿಹಾಸಿಕ ಕ್ಷಣಕ್ಕೆ 200 ವರ್ಷ ತುಂಬಿದ ಹಿನ್ನೆಲೆಯಲ್ಲಿ 2024ರಲ್ಲಿ ಸಡಗರದಿಂದ ಉತ್ಸವದ ದ್ವಿಶತಮಾನೋತ್ಸವ ಆಚರಿಸಲಾಗಿತ್ತು. ಇದಕ್ಕೆ ಸರ್ಕಾರ ₹5 ಕೋಟಿ ಅನುದಾನ ನೀಡಿತ್ತು. ಮೂರು ದಿನ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು.

ಆದರೆ, ವಿವಿಧ ಕಾರ್ಯಕ್ರಮ ನಡೆದರಷ್ಟೇ ಸಾಲದು. ಉತ್ಸವದ ದ್ವಿಶತಮಾನೋತ್ಸವ ಪ್ರಯುಕ್ತ  ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಈವರೆಗೂ ಅದು ಈಡೇರಿಲ್ಲ.

ADVERTISEMENT

ಇನ್ನೂ ಆರಂಭವಾಗದ ಕಾಮಗಾರಿ

ಕಿತ್ತೂರು ಸಂಸ್ಥಾನ, ಚನ್ನಮ್ಮನ ಶೌರ್ಯ, ಸಾಹಸ ಹಾಗೂ ಕಿತ್ತೂರು ಕಲಿಗಳ ಹೋರಾಟದ ಕಥನವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಿತ್ತರಿಸಲು ಕಿತ್ತೂರಿನಲ್ಲಿ ‘ಥೀಮ್ ಪಾರ್ಕ್’ ನಿರ್ಮಾಣಕ್ಕೆ 2025ರ ಜುಲೈನಲ್ಲಿ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿತ್ತು. ಈವರೆಗೆ ಆ ಕಾಮಗಾರಿಯೂ ಆರಂಭಗೊಂಡಿಲ್ಲ.

‘ಕಿತ್ತೂರು ಉತ್ಸವದ ದ್ವಿಶತಮಾನೋತ್ಸವದ ಪ್ರಯುಕ್ತ, ಕಿತ್ತೂರು ಕೋಟೆ, ಅರಮನೆಯ ಅವಶೇಷ ಸಂರಕ್ಷಿಸಲಾಗುತ್ತಿದೆ. ₹32 ಕೋಟಿ ವೆಚ್ಚದಲ್ಲಿ ಇಡೀ ದೇಶದಲ್ಲೇ ಮಾದರಿಯಾದ ಥೀಮ್‌ ಪಾರ್ಕ್‌ ನಿರ್ಮಿಸಲಾಗುತ್ತಿದ್ದು, ಶೀಘ್ರ ಟೆಂಡರ್‌ ಕರೆಯಲಾಗುವುದು’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಹಿನ್ನೆಲೆಯಲ್ಲಿ ಒಂದಿಷ್ಟು ಉತ್ತಮ ಕೆಲಸಗಳಾಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಅದೂ ಆಗದ್ದರಿಂದ ನಿರಾಸೆಯಾಗಿದೆ
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿರಾಜಗುರು ಸಂಸ್ಥಾನ ಕಲ್ಮಠ ಕಿತ್ತೂರು
ಕಿತ್ತೂರು ಉತ್ಸವದ ದ್ವಿಶತಮಾನೋತ್ಸವ ಘಳಿಗೆ ಮತ್ತೆ ಬಾರದು. ಇದರ ಸವಿನೆನಪಿಗಾಗಿ ಸ್ಮಾರಕ ಸ್ಥಾಪಿಸಬೇಕು. ರಾಜಗುರು ಸಂಸ್ಥಾನ ಕಲ್ಮಠದಲ್ಲಿರುವ ರಾಜರ ಸಮಾಧಿಗಳನ್ನು ಅಭಿವೃದ್ಧಿಪಡಿಸಬೇಕು
ಸಂತೋಷ ಹಾನಗಲ್ಲ ಸಂಶೋಧಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.