ಚನ್ನಮ್ಮನ ಕಿತ್ತೂರು: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಅಂತರರಾಷ್ಟ್ರೀಯ ವಸತಿ ಸೈನಿಕ ಶಾಲೆ ವಿದ್ಯಾರ್ಥಿನಿಯರು ಮಧ್ಯಪ್ರದೇಶದ ಇಂದೋರ್ ಹಾಗೂ ಹರಿಯಾಣದ ಹಿಸಾರ್ ನಲ್ಲಿ ಈಚೆಗೆ ನಡೆದ 14, 17 ಮತ್ತು 19 ವರ್ಷದೊಳಗಿನ ಟೇಬಲ್ ಟೆನಿಸ್ ಹಾಗೂ ಹಾಕಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಟೇಬನ್ ಟೆನಿಸ್ ಪಂದ್ಯಾವಳಿಯಲ್ಲಿ 15ಕ್ಕೂ ಹೆಚ್ಚು ಐಪಿಎಸ್ ಸಿ ಶಾಲೆಗಳು ಹಾಗೂ 14 ಮತ್ತು 17 ವರ್ಷದೊಳಗಿನ ಬಾಲಕಿಯರ ಪ್ರಿ ನೆಹರೂ ಕಪ್ ಹಾಕಿ ಪಂದ್ಯಾವಳಿಯಲ್ಲಿ ಕ್ರಮವಾಗಿ 9 ಹಾಗೂ 6 ತಂಡಗಳು ಭಾಗವಹಿಸಿದ್ದವು.
17ನೇ ವರ್ಷದೊಳಗಿನವರ ಹಾಕಿ ವಿಭಾಗದ ಸ್ಪರ್ಧೆಯಲ್ಲಿ ಕ್ಯಾಡೆಟ್ ಲಕ್ಷಿತಾ ಸಿ.ವಿ. ಉತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ಕ್ಯಾಡೆಟ್ ಅಭಿಜ್ಞಾ ಎಂ. ತನಿಷಾ, ಲಕ್ಷಿತಾ ಸಿ.ವಿ. ಗಂಗಾ ಜಾನ್ಹವಿ ಮತ್ತು 14 ವರ್ಷದೊಳಗಿನವರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಪ್ರಜ್ಞಾ, ಶ್ರಾವಣಿ, ಖುಷಿ ಎಸ್ ಜಿಎಫ್ಐಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉತ್ತಮ ಸಾಧನೆ ತೋರಿದ ವಿದ್ಯಾರ್ಥಿನಿಯರು ಹಾಗೂ ತರಬೇತುದಾರ ಶಿಕ್ಷಕರನ್ನು ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿ ಕಾರ್ಯಾಧ್ಯಕ್ಷ ಡಾ. ವಿ. ವಿ. ತೆಗ್ಗಿಮನಿ, ಸದಸ್ಯ ಕಾರ್ಯದರ್ಶಿ ಮಹಾಂತೇಶ ಕೌಜಲಗಿ, ಪ್ರಾಚಾರ್ಯ ನಿವೃತ್ತ ಕರ್ನಲ್ ರಾಹುಲ್ ಶರ್ಮಾ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.