ADVERTISEMENT

ಚನ್ನಮ್ಮನ ಕಿತ್ತೂರು | ಕೋಟೆ ಆವರಣ: ಭಾನುವಾರವೂ ಜನಸಂದಣಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:18 IST
Last Updated 27 ಅಕ್ಟೋಬರ್ 2025, 2:18 IST
ಚನ್ನಮ್ಮನ ಕಿತ್ತೂರಿನ ಕೋಟೆಯ ಮುಖ್ಯ ದ್ವಾರದ ಮುಂದಿನ ದ್ವಿಪಥ ರಸ್ತೆ ಬದಿಯಲ್ಲಿ ಸೇರಿದ್ದ ಜನರು
ಚನ್ನಮ್ಮನ ಕಿತ್ತೂರಿನ ಕೋಟೆಯ ಮುಖ್ಯ ದ್ವಾರದ ಮುಂದಿನ ದ್ವಿಪಥ ರಸ್ತೆ ಬದಿಯಲ್ಲಿ ಸೇರಿದ್ದ ಜನರು   

ಚನ್ನಮ್ಮನ ಕಿತ್ತೂರು: ಅ.23ರಿಂದ 25ರವರೆಗೆ ನಡೆದ ಕಿತ್ತೂರು ಉತ್ಸವದ ಸಡಗರದಲ್ಲಿ ಮಿಂದೆದ್ದ ಸಾರ್ವಜನಿಕರು ಭಾನುವಾರವೂ ಬಿಡುವು ಮಾಡಿಕೊಂಡು ಕುಟುಂಬ ಸಮೇತವಾಗಿ ಕೋಟೆ ಆವರಣದತ್ತ  ಹೆಜ್ಜೆ
ಹಾಕಿದರು.

ವಸ್ತುಸಂಗ್ರಹಾಲಯ, ಬೀದಿಬದಿ ಮಾರಾಟಕ್ಕಿದ್ದ ಆಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳನ್ನು ಖರೀದಿಸಿದರು. ತಿರುಗುವ ತೊಟ್ಟಿಲು ಸೇರಿ ವಿವಿಧ ರೀತಿಯ ರೋಮಾಂಚನಕಾರಿ ಆಟವಾಡಿ ಖುಷಿಪಟ್ಟರು.

ಉತ್ಸವದ ಮೂರು ದಿನಗಳ ಪೈಕಿ ಎರಡು ದಿನ ವಿಪರೀತ ಮಳೆ ಕಾಡಿತು. ಪಟ್ಟಣದ ಮುಖ್ಯಬೀದಿ ಅಲ್ಲಲ್ಲಿ ಜಲಾವೃತಗೊಂಡಿತು.

ADVERTISEMENT

ಕೋಟೆ ಆವರಣವಂತೂ ರಾಡಿಮ
ಯವಾಗಿತ್ತು. ಕೆಸರಿನ ಕಣದಲ್ಲಿ ಸಾರ್ವಜನಿಕರು ಓಡಾಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಉತ್ಸವದ ಕೊನೇ ದಿನ ಇಡೀ ಪಟ್ಟಣವೇ ಜನಸಂದಣಿಯಿಂದ
ಕೂಡಿತ್ತು.

ಕಿತ್ತೂರು ರಾಣಿ ಚನ್ನಮ್ಮ ವೇದಿಕೆ ಭಾನುವಾರ ಜನರಿಲ್ಲದೆ ಭಣಗುಟ್ಟಿತು. ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲೂ ಇಂಥದ್ದೇ ವಾತಾವರಣವಿತ್ತು. 

ಕೋಟೆ ಮುಖ್ಯದ್ವಾರದ ಎದುರಿನ ದ್ವಿಪಥ ರಸ್ತೆ, ಕಾಲೇಜು ರಸ್ತೆ ಮಾತ್ರ ಜನಸಂದಣಿಯಿಂದ ತುಂಬಿ ತುಳುಕಿದವು. ಮಧ್ಯಾಹ್ನದಿಂದಲೇ ಈ ರಸ್ತೆಯಲ್ಲಿ ಕುಳಿತಿದ್ದ ವರ್ತಕರ ಬಳಿ ಜಮಾಯಿಸಿದ್ದ ಖರೀದಿದಾರರು ಸಿದ್ಧಉಡುಪು, ಫ್ಯಾನ್ಸಿ ವಸ್ತುಗಳು, ಬಳೆ, ಮಕ್ಕಳ ಆಟಿಕೆ ಕೊಂಡು ವಾಪಸಾ
ಗುತ್ತಿದ್ದರು. ಮೂರು ದಿನವೂ ಪೊಲೀಸರು ಬಿಗಿ ಕಾವಲು ಹಾಕಿದ್ದರು.

ಅಧಿಕ ಜನ ವೀಕ್ಷಣೆ ‘ಕೋಟೆ

ಆವರಣದೊಳಗಿನ ಪ್ರಾಚ್ಯ ವಸ್ತು ಸಂಗ್ರಹಾಲಯ ಮೂರು ದಿನ ವೀಕ್ಷಕರಿಂದ ತುಂಬಿ ತುಳುಕಿತು. ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿ ಸಂಸ್ಥಾನ ಕಾಲದ ಬಟ್ಟೆ ಖಡ್ಗ ಗುರಾಣಿ ಅದಕ್ಕಿಂತಲೂ ಹಳೇ ಕಾಲದ ಶಿಲಾಶಾಸನಗಳನ್ನು ವೀಕ್ಷಿಸಿದರು’ ಎಂದು ಕ್ಯೂರೇಟರ್ ರಾಘವೇಂದ್ರ ಮಾಹಿತಿ ನೀಡಿದರು.

ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ: ಅಸಮಾಧಾನ

ವಸತಿ ಸಚಿವ ಜಮೀರ್‌ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟಿಸಿರುವ ‘ಕಲ್ಟ್’ ಚಿತ್ರದ ಎರಡನೇ ಗೀತೆಯನ್ನು ಶುಕ್ರವಾರ ಕಿತ್ತೂರು ರಾಣಿ ಚನ್ನಮ್ಮ ವೇದಿಕೆಯಲ್ಲಿ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಿದ ಜಿಲ್ಲೆಯ ಹಿರಿಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಚಿವರ ಮಗ ಎಂಬ ಏಕೈಕ ಕಾರಣಕ್ಕೆ ಅವಕಾಶ ಮಾಡಿಕೊಟ್ಟಿದ್ದು ಎಷ್ಟರಮಟ್ಟಿಗೆ ಸರಿ? ನಮ್ಮ ಮನೆತನದ ಕಾರ್ಯಕ್ರಮವನ್ನು ಅಲ್ಲಿ ಮಾಡಲು ಅವಕಾಶ ಕೊಡುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.