ಬೆಳಗಾವಿ: ಕಿತ್ತೂರು ಉತ್ಸವ ಪ್ರಯುಕ್ತ ರಾಜ್ಯದಾದ್ಯಂತ ಸಂಚರಿಸುತ್ತಿರುವ ವೀರಜ್ಯೋತಿಯನ್ನು ನಗರದಲ್ಲಿ ಸೋಮವಾರ ಸಂಭ್ರಮದಿಂದ ಸ್ವಾಗತಿಸಲಾಯಿತು.
ಖಾನಾಪುರ ತಾಲ್ಲೂಕಿನ ನಂದಗಡ ಮಾರ್ಗವಾಗಿ ಬೆಳಗಾವಿ ನಗರ ಪ್ರವೇಶಿಸಿದ ವೀರಜ್ಯೋತಿಯನ್ನು ಮೇಯರ್ ಮಂಗೇಶ ಪವಾರ ಅವರು, ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಸ್ವಾಗತಿಸಿ ಪೂಜೆ ಸಲ್ಲಿಸಿದರು.
ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಮನಸೆಳೆಯಿತು.
ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ್ ಬಸವರಾಜ ನಾಗರಾಳ, ಬಸವರಾಜ ರೊಟ್ಟಿ, ಮುರುಗೇಶ ಶಿವಪೂಜಿ, ಕಸ್ತೂರಿ ಭಾವಿ ಇತರರಿದ್ದರು.
ಇಲ್ಲಿಂದ ಕಾಕತಿ, ಹಿರೇಬಾಗೇವಾಡಿ, ಚಿಕ್ಕಬಾಗೇವಾಡಿ ಮಾರ್ಗವಾಗಿ ಬೈಲಹೊಂಗಲದತ್ತ ಜ್ಯೋತಿ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.