ADVERTISEMENT

ಬೆಳಗಾವಿ: ಕೆಎಲ್‌ಇ ವಿ.ವಿ.ಯಲ್ಲಿ ಕೋಟಿ ಕಂಠ ಗಾಯನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 10:59 IST
Last Updated 28 ಅಕ್ಟೋಬರ್ 2022, 10:59 IST
ಬೆಳಗಾವಿಯ ಕೆಎಲ್‌ಇ ವಿಶ್ವವಿದ್ಯಾಲಯದ ಜೆ.ಎನ್‌. ಮೆಡಿಕಲ್‌ ಕಾಲೇಜು ಉದ್ಯಾನದಲ್ಲಿ ಶುಕ್ರವಾರ, ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಗಾಯಕರು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡರು
ಬೆಳಗಾವಿಯ ಕೆಎಲ್‌ಇ ವಿಶ್ವವಿದ್ಯಾಲಯದ ಜೆ.ಎನ್‌. ಮೆಡಿಕಲ್‌ ಕಾಲೇಜು ಉದ್ಯಾನದಲ್ಲಿ ಶುಕ್ರವಾರ, ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಗಾಯಕರು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡರು   

ಬೆಳಗಾವಿ: ಇಲ್ಲಿನ ಕೆಎಲ್‌ಇ ವಿಶ್ವವಿದ್ಯಾಲಯದ ಜೆ.ಎನ್‌. ಮೆಡಿಕಲ್ ಕಾಲೇಜು ಉದ್ಯಾನದಲ್ಲಿ ಶುಕ್ರವಾರ 300 ಗಾಯಕರು ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕೆಎಲ್‌ಇಎಸ್‌ ಸಂಗೀತ ಮಹಾವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ವತಧಾರಿಗಳಾಗಿ ಬಂದ ಎಲ್ಲ ಗಾಯಕರೂ ಸುಶ್ರಾವ್ಯವಾಗಿ ಕನ್ನಡ ಗೀತೆಗಳನ್ನು ಹಾಡಿದರು. ಕುವೆಂಪು, ಹುಯಿಲಗೋಳ ನಾರಾಯಣರಾಯ, ಡಿ.ಎಸ್.ಕರ್ಕಿ, ಚನ್ನವೀರ ಕಣವಿ, ಹಂಸಲೇಖಾ ಅವರು ರಚಿಸಿದ ಹಾಡುಗಳನ್ನು ಹಾಡಿ ರಂಜಿಸಿದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಕುಲಪತಿ ಡಾ.ಎನ್.ಎಸ್. ಮಹಾಂತಶೆಟ್ಟಿ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಯುಎಸ್‌ಎಂ- ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ, ಹೊಸ ಯೋಜನೆಗಳ ನಿರ್ದೇಶಕ ಡಾ.ವಿ.ಡಿ. ಪಾಟೀಲ, ಕನ್ನಡ ಬಳಗದ ಕಾರ್ಯಾಧ್ಯಕ್ಷ ಡಾ.ಅವಿನಾಶ ಕವಿ ಸೇರಿದಂತೆ ಎಲ್ಲ ಸಂಗ ಸಂಸ್ಥೆಗಳ ಸಿಬ್ಬಂದಿ ಪಾಲ್ಗೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.