ADVERTISEMENT

ಸಂಗೊಳ್ಳಿ ರಾಯಣ್ಣ ಜ್ಯೋತಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 16:32 IST
Last Updated 8 ಜನವರಿ 2025, 16:32 IST
ಸಂಕೇಶ್ವರಕ್ಕೆ ಬುಧವಾರ ಆಗಮಿಸಿದ ವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ಪುರಸಭೆಯ ಎದುರು ಭವ್ಯವಾಗಿ ಸ್ವಾಗತ ಕೋರಲಾಯಿತು
ಸಂಕೇಶ್ವರಕ್ಕೆ ಬುಧವಾರ ಆಗಮಿಸಿದ ವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ಪುರಸಭೆಯ ಎದುರು ಭವ್ಯವಾಗಿ ಸ್ವಾಗತ ಕೋರಲಾಯಿತು   

ಸಂಕೇಶ್ವರ: ವೀರ ಸಂಗೊಳ್ಳಿ ರಾಯಣ್ಣ ಉತ್ಸವದ ನಿಮಿತ್ತ ಇಡೀ ಬೆಳಗಾವಿ ಜಿಲ್ಲೆಯ್ಯಾದ್ಯಾಂತ ಸಂಚರಿಸುತ್ತಿರುವ ರಾಯಣ್ಣ ಜ್ಯೋತಿಯು ಬುಧವಾರ ಸಂಜೆ ಸಂಕೇಶ್ವರಕ್ಕೆ ಬಂದಾಗ ಭವ್ಯ ಸ್ವಾಗತ ಕೋರಲಾಯಿತು.

ಇಲ್ಲಿನ ಪುರಸಭೆಯ ಕಾರ್ಯಾಲಯದ ಎದುರಿಗೆ ರಾಯಣ್ಣ ಜ್ಯೋತಿ ಬಂದಾಗ ಸಂಕೇಶ್ವರ ಪುರಸಭೆಯ ಅಧ್ಯಕ್ಷೆ ಸೀಮಾ ಹತನೂರಿ, ಉಪಾಧ್ಯಕ್ಷ ವಿವೇಕ ಕ್ವಳ್ಳಿ, ಮುಖ್ಯಾಧಿಕಾರಿ ಪ್ರಕಾಶ ಮಠದ, ಪುರಸಭೆಯ ಸದಸ್ಯರು, ಸಾಹಿತಿ ಪ್ರೊ.ಎಲ್.ವಿ,ಪಾಟೀಲ, ಕನ್ನಡ ಚಳುವಳಿಗಾರರ ಸಂಘದ ಅಧ್ಯಕ್ಷ ಕಿರಣ ನೇಸರಿ ಮುಂತಾದವರು ಉಪಸ್ಥಿತರಿದ್ದು ಜ್ಯೋತಿಯನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಪ್ರೊ.ಎಲ್.ವಿ.ಪಾಟೀಲ ಅವರು, ದೇಶಕ್ಕೆ ಸ್ವಾತಂತ್ರ್ಯ ಬೇಕೆಂಬ ಕಿಡಿ ಹೊತ್ತಿಸಿದವರೇ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರು. ಅವರಿಂದ ಸ್ಫೂರ್ತಿ ಪಡೆದ ಅನೇಕರು ನಂತರದ ಹೋರಾಟಗಳಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಂಡರು. ಸಂಗೊಳ್ಳಿ ರಾಯಣ್ಣ ಅವರ ಶೌರ್ಯ ಎಂದೆಂದಿಗೂ ನೆನಪಿಡುವಂಥದ್ದು. ಅವರ ಬದುಕು ನಮಗೆ ಮಾದರಿ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.