ಕಾಗವಾಡ: ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗಿದ್ದು, ಉಗಾರ-ಕುಡಚಿ ಮಾರ್ಗ ಮಧ್ಯದ ಸೇತುವೆಯ ಮೇಲೆ 3 ಅಡಿ ನೀರು ಬಂದಿದೆ. ಬುಧವಾರ ಎರಡನೇ ಬಾರಿಗೆ ಸಾರಿಗೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.
ಸೇತುವೆ ಮುಳುಗಡೆಯಾಗಿರುವುದು ಹಾಗೂ ನದಿ ನೀರಿನ ಮಟ್ಟ ಏರುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಉಗಾರ ಹಾಗೂ ಕುಡಚಿ ಎರಡೂ ಬದಿಗೆ ಪೊಲೀಸರು ಬ್ಯಾರಿಕೇಡಗಳನ್ನು ಹಾಕಿ ಪೊಲೀಸ್ ಗಸ್ತು ನೇಮಿಸಿದ್ದಾರೆ.
ಮಾರ್ಗ ಕಡಿತದಿಂದಾಗಿ ಬಾಗಲಕೋಟೆ, ಜಮಖಂಡಿ, ಮುಧೋಳ, ಮಹಾಲಿಂಗಪೂರ, ಹಾರೂಗೇರಿಗೆ ತೆರಳುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಇದಕ್ಕೆ ಪರ್ಯಾಯವಾಗಿ, ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ, ಮಾರ್ಗವಾಗಿ 50 ಕಿ.ಮೀ ಹೆಚ್ಚಿಗೆ ಕ್ರಮಿಸಿ ತೆರಳುವ ಪರಿಸ್ಥಿತಿ ಬಂದಿದೆ.
ಹಲವೆಡೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಪರಿಣಾಮ ರೈತರು ಬೆಳೆದ ಮೆಕ್ಕೆಜೋಳ, ಉದ್ದು, ಸೇರಿದಂತೆ ಇನ್ನಿತರ ಬೆಳೆಗಳು ಹಾಳಾಗಿದೆ. ರೈತರಿಗೆ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.