ADVERTISEMENT

ಚಿಕ್ಕೋಡಿ | ತಗ್ಗಿದ ‘ಮಹಾ’ ಮಳೆ: ಕೃಷ್ಣೆಯಲ್ಲಿ ನೀರಿನ ಪ್ರಮಾಣ 1 ಅಡಿ ಇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 13:00 IST
Last Updated 23 ಜೂನ್ 2025, 13:00 IST
<div class="paragraphs"><p>ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ ಗ್ರಾಮದ ಬಳಿ ದೂಧಗಂಗಾ ನದಿ ಉಕ್ಕಿ ಹರಿದು ಹೊಲ– ಗದ್ದೆಗಳಿಗೆ ನೀರು ನುಗ್ಗಿದೆ  </p></div>

ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ ಗ್ರಾಮದ ಬಳಿ ದೂಧಗಂಗಾ ನದಿ ಉಕ್ಕಿ ಹರಿದು ಹೊಲ– ಗದ್ದೆಗಳಿಗೆ ನೀರು ನುಗ್ಗಿದೆ

   

ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್. ಚಿನಕೇಕರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ಹಾಗೂ ಉಪನದಿಗಳ ನೀರಿನ ಹರಿಯುವ ಪ್ರಮಾಣದಲ್ಲಿ ಸೋಮವಾರ 1 ಅಡಿಯಷ್ಟು ಇಳಿಕೆಯಾಗಿದೆ. ಜಲಾವೃತಗೊಂಡ ಮೂರು ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.

ADVERTISEMENT

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ಕೃಷ್ಣಾ ಜಲಾನಯನ ಪ್ರದೇಶದ ಕೊಯ್ನಾದಲ್ಲಿ 4.9 ಸೆಂ.ಮೀ, ವಾರಣಾ 3.1 ಸೆಂ.ಮೀ, ಕಾಳಮ್ಮವಾಡಿ 2.9 ಸೆಂ.ಮೀ, ಮಹಾಬಳೇಶ್ವರ 3 ಸೆಂ.ಮೀ, ನವಜಾ 2.7 ಸೆಂ.ಮೀ, ರಾಧಾನಗರಿ 8.3 ಸೆಂ.ಮೀ, ಮಳೆ ದಾಖಲಾಗಿದೆ.

ಕೊಲ್ಹಾಪುರ ಜಿಲ್ಲೆಯ ರಾಜಾಪೂರೆ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 65 ಸಾವಿರ ಕ್ಯೂಸೆಕ್ ಹೊರ ಹರಿವು ಇದ್ದು, ಕಲ್ಲೋಳ ಬಳಿ ದೂಧಗಂಗಾ ನದಿಗೆ 14784 ಕ್ಯೂಸೆಕ್‌ ಒಳ ಹರಿವು ಇದೆ. ತಾಲೂಕಿನ ಕಲ್ಲೋಳ– ಯಡೂರ ಸೇತುವೆ ಬಳಿಯಲ್ಲಿ ಕೃಷ್ಣಾ ನದಿಗೆ 79784 ಕ್ಯೂಸೆಕ್‌ ಹೊರ ಹರಿವು ಇದೆ.

ಕಾರದಗಾ– ಭೋಜ, ಮಲಿಕವಾಡ– ದತ್ತವಾಡ, ಕಲ್ಲೋಳ– ಯಡೂರ ಸೇತುವೆಗಳು ನಾಲ್ಕು ದಿನಗಳಿಂದ ಜಲಾವೃತಗೊಂಡ ಸ್ಥಿತಿಯಲ್ಲಿ ಇವೆ. ನದಿ ತಟದಲ್ಲಿರುವ ಹೊಲ ಗದ್ದೆಗಳಿಗೆ ನದಿ ನೀರು ನುಗ್ಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.