ADVERTISEMENT

ಪ್ರತಿ ಟನ್‌ ಕಬ್ಬಿಗೆ ₹3 ಸಾವಿರ ಬೆಲೆ: ಕೃಷ್ಣಾ ಸಕ್ಕರೆ ಕಾರ್ಖಾನೆಯಿಂದ ಘೋಷಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 15:48 IST
Last Updated 2 ನವೆಂಬರ್ 2023, 15:48 IST
ಪರಪ್ಪಣ್ಣ ಸವದಿ
ಪರಪ್ಪಣ್ಣ ಸವದಿ   

ಅಥಣಿ: ಸಹಕಾರ ತತ್ವದ ಆಧಾರದ ಮೇಲೆ ನಿರ್ಮಾಣಗೊಂಡಿರುವ ಅಥಣಿ ತಾಲ್ಲೂಕಿನ ದಿ. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ 2023-24 ನೇ ಸಾಲಿಗೆ ಕಬ್ಬು ಪೂರೈಸುವ ರೈತರ ಪ್ರತಿ ಟನ್‌ ಕಬ್ಬಿಗೆ ₹3 ಸಾವಿರ ನೀಡಲಾಗುವುದೆಂದು ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ಹೇಳಿದರು.

ಬುಧವಾರ ನಡೆದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ನಿರ್ದರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಾವು ಯಾವುದೇ ಉಪ ಉತ್ಪನ್ನಗಳನ್ನು ಉತ್ಪಾದಿಸದೆ ಕೇವಲ ಕಬ್ಬಿನಿಂದ ಸಕ್ಕರೆ ತಯಾರಿಸಿ ರೈತರಿಗೆ ಯೋಗ್ಯ ದರ ನೀಡುತ್ತಿದ್ದೇವೆ. ಬರುವ ದಿನಮಾನಗಳಲ್ಲಿ ಇಥೆನಾಲ್ ಘಟಕವನ್ನು ಪ್ರಾರಂಭಿಸುವುದರ ಜೊತೆಗೆ ಕೋ-ಜನ್ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದರಿಂದ ರೈತರಿಗೆ ಇನ್ನಷ್ಟು ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ರೈತ ಬಾಂದವರು ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಸುವಂತೆ ಮನವಿ ಮಾಡಿದರು.

ಪ್ರಸಕ್ತ ಹಂಗಾಮಿನಲ್ಲಿ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ಆದರೆ ಈ ವರ್ಷ ಮಳೆಯಾಗದೇ ಇರುವುದರಿಂದ ಕಬ್ಬಿನ ಬೆಳೆ ಅತ್ಯಲ್ಪವಿದೆ. ಕಾರ್ಖಾನೆಗೆ ಲಾಭವಾಗಬೇಕು, ರೈತರಿಗೆ ಬೆಂಬಲ ಬೆಲೆ ಸಿಗಬೇಕೆಂಬ ದೃಷ್ಟಿಯಿಂದ ಹೆಚ್ಚಿನ ಕಬ್ಬನ್ನು ಕಳಿಸುವಂತೆ ಪರಪ್ಪಣ್ಣ ಸವದಿ ಮನವಿ ಮಾಡಿದರು.

ಈ ವೇಳೆ ಉಪಾಧ್ಯಕ್ಷ ಶಂಕರ ವಾಘಮೊಡೆ, ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜಿ.ಎಂ. ಪಾಟೀಲ, ನಿರ್ದೇಶಕರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ಸೌರಭ ಪಾಟೀಲ, ವಿಶ್ವನಾಥ ಪೊಲಿಸಪಾಟೀಲ, ರಮೇಶ ಪಟ್ಟಣ, ಮಲ್ಲಿಕಾರ್ಜುನ ಗೊಠಕಿಂಡಿ, ಸಿದ್ರಾಯ ನಾಯಿಕ, ಹಣಮಂತ ಜಗದೇವ, ಸುನಂದಾ ನಾಯಿಕ, ರುಕ್ಮೀಣಿ ಕುಲಕರ್ಣಿ ಇದ್ದರು.

ಕಾರ್ಖಾನೆಯ ಕಚೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.