ADVERTISEMENT

ಇನ್ನು ಪಕ್ಷ ನೋಡಿ ಮತ ಹಾಕಲ್ಲ: ಕೂಡಲಸಂಗಮಶ್ರೀ

ಪಂಚಮಸಾಲಿ ಸಮಾಜ ಹುಟ್ಟು ಹಾಕಿದ್ದೆ ಮೀಸಲಾತಿಗಾಗಿ:

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 21:19 IST
Last Updated 17 ನವೆಂಬರ್ 2022, 21:19 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ‘ಪಕ್ಷ ನೋಡಿ ಮತ ಹಾಕುವ ಕಾಲ‌ ಮುಗೀತು. ಇನ್ನು ನಮ್ಮ ಸಮಾಜದ ವ್ಯಕ್ತಿ ನೋಡಿ ಮತ ಹಾಕುತ್ತೇವೆ’ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮದು ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ಹೋರಾಟ ಅಲ್ಲ. ರಾಜಕೀಯವೂ ಅಲ್ಲ. ನಮ್ಮ ಹೋರಾಟದ ಉದ್ದೇಶ ಮೀಸಲಾತಿ ಮಾತ್ರ’ ಎಂದರು.

‘ಪಂಚಮಸಾಲಿ ಸಮಾಜ ಹುಟ್ಟುಹಾಕಿದ್ದೆ ಮೀಸಲಾತಿ ಪಡೆಯಲು. ಹೋರಾಟದಿಂದಾಗಿ ರಾಜ್ಯದಲ್ಲಿ ಸಮಾಜದ 1.30 ಕೋಟಿ ಜನಸಂಖ್ಯೆ ಇದೆ ಎಂದು ಗೊತ್ತಾಗಿದೆ. ರಾಜಕಾರಣಿಗಳುಸಮಾಜವನ್ನು ಚುನಾವಣೆಯಲ್ಲಿ ‘ಟ್ರಂಪ್ ಕಾರ್ಡ್’ ಮಾಡಿ ಕೊಂಡಿದ್ದಾರೆ. ಹೀಗಾಗಿ ಸಮಾಜ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಪಡೆಯೋಣ' ಎಂದರು.

ADVERTISEMENT

‘ಮೀಸಲಾತಿ ಕುರಿತು ಸರ್ಕಾರ ನಾಲ್ಕು ಬಾರಿ ಮಾತು ತಪ್ಪಿದೆ. ನಾವೀಗ ನಿರ್ಣಾಯಕ ಹಂತದಲ್ಲಿದ್ದೇವೆ. ಚುನಾವಣೆ ನೀತಿ ಸಂಹಿತೆಗೆ ಮೊದಲು ಹಕ್ಕು ಪಡೆದೆ ತೀರಬೇಕು. ಸಮಾಜದವರು,ಮುಖಂಡರು ಏನೇ ಭಿನ್ನಾಭಿಪ್ರಾಯ ಇದ್ದರೂ ಪಕ್ಕಕ್ಕಿಟ್ಟು ಒಗ್ಗಟ್ಟಾಗಬೇಕು. ಡಿ. 5ರಂದು ಬೈಲಹೊಂಗಲದ ಸಮಾವೇಶದಲ್ಲಿ ಪಾಲ್ಗೊಳ್ಳ ಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.