
ಉಗರಗೋಳ: ‘ಜಂಗಮ ಸಮುದಾಯದ ಮಕ್ಕಳಿಗಾಗಿ ಸಂಸ್ಕೃತ ಪಾಠಶಾಲೆ ತೆರೆದು ಉಚಿತವಾಗಿ ಶಿಕ್ಷಣ ನೀಡಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಎಂ.ಆರ್. ಹಿರೇಮಠ ಅವರ ಕಾರ್ಯ ಶ್ಲಾಘನೀಯ’ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ, ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ, ಉಪನ್ಯಾಸಕ ಉಮೇಶ ನರಗುಂದ ಮಾತನಾಡಿದರು. ಶೈಕ್ಷಣಿಕ ಸಾಧನೆ ಮೆರೆದ ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಲಾಯಿತು.
ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಂ.ಆರ್. ಹಿರೇಮಠ, ನಿರ್ವಾಣೇಶ್ವರ ಮಠದ ಮಹಾಂತ ಶ್ರಿಗಳು, ರಾಮಾರೂಢ ಮಠದ ಬ್ರಹ್ಮಾರೂಢ ಶ್ರೀಗಳು, ಜಗದೀಶ ಕೌಜಗೇರಿ, ಶಿದ್ದನಗೌಡ ಗೂಡರಾಶಿ, ಅಲ್ಲಮಪ್ರಭು ಪ್ರಭುನವರ, ಪುಂಡಲೀಕ ಬಾಳೋಜಿ, ಮಂಜುನಾಥಯ್ಯ ಕಂಬಿ, ಗುರುಶಿದ್ದಯ್ಯ ಹಿರೇಮಠ, ಉಮೇಶ ನರಗುಂದ, ಶರಣಗೌಡ ಪಾಟೀಲ, ಏಕನಗೌಡ ತಿಪರಾಶಿ, ಚಂದ್ರಣ್ಣ ಶ್ಯಾಮರಾಯನವರ, ದೇವರಡ್ಡಿ ಬಿಜಗುಪ್ಪಿ, ಮಂಜುನಾಥ ಯಕ್ಕುಂಡಿ, ಧರ್ಮಪ್ಪ ಚಂದರಗಿ, ಜಗದೀಶ ಬೂದಣ್ಣವರ, ಆನಂದ ಭೋವಿ, ಮುತ್ತಯ್ಯ ತೋರಗಲ್ ಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.