ADVERTISEMENT

ಲಾಕ್‌ಡೌನ್: ಕಲ್ಲಂಗಡಿಗೆ ಸಿಗದ ಬೆಲೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 11:05 IST
Last Updated 12 ಮೇ 2021, 11:05 IST
ತೆಲಸಂಗ ಗ್ರಾಮದಲ್ಲಿ ರೈತರೊಬ್ಬರು ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಮಾರಾಟವಾಗದೆ ಉಳಿದ ಕಲ್ಲಂಗಡಿಯನ್ನು ತೋಟದಲ್ಲಿ ಬಿಟ್ಟಿದ್ದು, ಜನ ಆಯ್ದುಕೊಳ್ಳುತ್ತಿರುವುದು
ತೆಲಸಂಗ ಗ್ರಾಮದಲ್ಲಿ ರೈತರೊಬ್ಬರು ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಮಾರಾಟವಾಗದೆ ಉಳಿದ ಕಲ್ಲಂಗಡಿಯನ್ನು ತೋಟದಲ್ಲಿ ಬಿಟ್ಟಿದ್ದು, ಜನ ಆಯ್ದುಕೊಳ್ಳುತ್ತಿರುವುದು   

ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿ ಮಾರಾಟ ಮಾಡಲೆಂದು ಕಿತ್ತು ಮರಗಳ ನೆರಳಲ್ಲಿ ಸಂಗ್ರಹಿಸಿಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ರೈತರು ಕೇಳಿದವರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.

ಕೋವಿಡ್ ಲಾಕ್‌ಡೌನ್‌ ಕಾರಣದಿಂದಾಗಿ ಬೆಲೆ ಕುಸಿತ ಉಂಟಾಗಿರುವುದರಿಂದ ರೈತರು, ತೋಟಕ್ಕೆ ಬಂದವರಿಗೆಲ್ಲ ಆಯ್ದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಕಲವೆಡೆ ಹಣ್ಣುಗಳು ತೋಟದಲ್ಲಿ ಕೊಳೆಯುತ್ತಿವೆ.

ಕಳೆದ ತಿಂಗಳು ಮಳೆ– ಗಾಳಿಗೆ ಅರ್ಧ ಇಳುವರಿಗೆ ಹೊಡೆತ ಬಿದ್ದಿತ್ತು. ಸದ್ಯ ಮಾರಾಟಕ್ಕೆ ಅವಕಾಶವಿಲ್ಲದೆ ತೊಂದರೆ ಆಗಿದೆ. ಕೆ.ಜಿ.ಗೆ ₹ 2 ಕೊಟ್ಟು ಖರೀದಿಸಿ ಒಯ್ಯಿರಿ ಎಂದರೂ ಸಗಟು ವ್ಯಾಪಾರಿಗಳು ಮಂದೆ ಬರುತ್ತಿಲ್ಲ. ಹೀಗಾಗಿ ಹಂಚುವುದು ಅನಿವಾರ್ಯವಾಗಿದೆ. ಕೆಲವರು ಕಟಾವು ಮಾಡಿದ್ದರೆ, ಕೆಲವರು ಬಳ್ಳಿಯಲ್ಲೇ ಬಿಟ್ಟಿದ್ದಾರೆ. ಆ ಹಣ್ಣುಗಳು ಹಾಳಾಗುತ್ತಿವೆ ಎನ್ನುತ್ತಾರೆ ರೈತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.