ADVERTISEMENT

ಬೆಳಗಾವಿ | ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 4:59 IST
Last Updated 31 ಜನವರಿ 2025, 4:59 IST
<div class="paragraphs"><p>ಸಚಿನ್ ಮಂಡೇದ,&nbsp;ನಿರಂಜನ ಪಾಟೀಲ</p></div>

ಸಚಿನ್ ಮಂಡೇದ, ನಿರಂಜನ ಪಾಟೀಲ

   

ಬೆಳಗಾವಿ: ಬೆಳಗಾವಿ ಉತ್ತರ ಸಬ್ ರಿಜಿಸ್ಟ್ರಾರ್ ಸಚಿನ್ ಮಂಡೇದ ಹಾಗೂ ರಾಯಬಾಗ ಪಶು ವೈದ್ಯಾಧಿಕಾರಿ ಸಂಜಯ ದುರ್ಗನ್ನವರ ಮೇಲೆ ಮನೆಗಳ ಮೇಲೆ, ಲೋಕಾಯುಕ್ತರು ಶುಕ್ರವಾರ ದಾಳಿ ಮಾಡಿದ್ದಾರೆ.

ಇಬ್ಬರು ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಮಾಡಿದ ಆರೋಪದಡಿ ದಾಳಿ ಮಾಡಲಾಗಿದೆ. ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ‌ ನಡೆದಿದೆ.

ADVERTISEMENT

ನಗರದ ಅನಗೋಳ, ಹಾರೋಗೇರಿ,‌ ಬೆಲ್ಲದ ಬಾಗೇವಾಡಿ ಸೇರಿ ಮೂರು ಕಡೆಗಳಲ್ಲಿ ದಾಳಿ ನಡೆದಿದ್ದು, ಅನಗೋಳದಲ್ಲಿ ಲೋಕಾಯುಕ್ತ ಸಿಪಿಐ ನಿರಂಜನ ಪಾಟೀಲ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.