ADVERTISEMENT

ಮೂಡಲಗಿ: ಮಹಾಲಕ್ಷ್ಮೀ ಪಲ್ಲಕ್ಕಿ, ಬಸವೇಶ್ವರ ರಥೋ‌ತ್ಸವ ಸಂಭ್ರಮ 

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 1:53 IST
Last Updated 5 ಫೆಬ್ರುವರಿ 2026, 1:53 IST
ಮೂಡಲಗಿ ತಾಲ್ಲೂಕಿನ ಮಸಗುಪ್ಪಿಯ ಮಹಾಲಕ್ಷ್ಮೀ ಪಲ್ಲಕ್ಕಿ ಉತ್ಸವ ಹಾಗೂ ಬಸವೇಶ್ವರ ರಥೋತ್ಸವವು ಬುಧವಾರ ಜರುಗಿತು. 
ಮೂಡಲಗಿ ತಾಲ್ಲೂಕಿನ ಮಸಗುಪ್ಪಿಯ ಮಹಾಲಕ್ಷ್ಮೀ ಪಲ್ಲಕ್ಕಿ ಉತ್ಸವ ಹಾಗೂ ಬಸವೇಶ್ವರ ರಥೋತ್ಸವವು ಬುಧವಾರ ಜರುಗಿತು.    

ಮೂಡಲಗಿ: ತಾಲ್ಲೂಕಿನ ಮಸಗುಪ್ಪಿಯ ಮಹಾಲಕ್ಷ್ಮೀದೇವಿ ಪಲ್ಲಕ್ಕಿ ಉತ್ಸವ ಹಾಗೂ ಬಸವೇಶ್ವರ ರಥೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು.

ಮಹಾಲಕ್ಷ್ಮೀದೇವಿ ದೇವಸ್ಥಾನದಿಂದ ಪ್ರಾರಂಭಗೊಂಡ ಪಲ್ಲಕ್ಕಿ ಉತ್ಸವ ಹಾಗೂ ಬಸವೇಶ್ವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಜಾತ್ರೆಯ ಪ್ರಾರಂಭದ ದಿನ ಸೋಮವಾರ ಬಸವೇಶ್ವರ ದೇವಸ್ಥಾನದಿಂದ ರಥವು ದೇವಿಯ ದೇವಸ್ಥಾನದವರೆಗೆ ಜರುಗಿ, ದೇವಸ್ಥಾನದ ಬಳಿಯಲ್ಲಿ ನಿಂತಿತು.

ಮೂರನೇ ದಿನವಾದ ಬುಧವಾರ ಮಹಾಲಕ್ಷ್ಮೀದೇವಿಯ ಪಲ್ಲಕ್ಕಿ ಹಾಗೂ ಬಸವೇಶ್ವರರ ರಥೋತ್ಸವವು ಬಸವೇಶ್ವರ ದೇವಸ್ಥಾನದ (ಪಾದಗಟ್ಟಿ)ವರೆಗೆ ವಿವಿಧ ವಾದ್ಯ ವೃಂದಗಳೊದಿಗೆ ಜರುಗಿತು. 

ADVERTISEMENT

ಕಳೆದ ಎರಡು ದಿನಗಳಿಂದ ಮಸಗುಪ್ಪಿ ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯ ಭಕ್ತರು ಉರಳು ಸೇವೆ, ದೀರ್ಘ ದಂಡ ನಮಸ್ಕಾರ ವೃತ ಪಾಲಿಸಿದರು. ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ನೈವೇದ್ಯಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.