ADVERTISEMENT

ಮಹಾರಾಷ್ಟ್ರ ಸಮುದ್ರ ದುರಂತ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ,ನಾಲ್ವರು ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:28 IST
Last Updated 4 ಅಕ್ಟೋಬರ್ 2025, 7:28 IST
   

ಖಾನಾಪುರ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾ ತಾಲ್ಲೂಕಿನ ಶಿರೋಡಾದ ವೇಳಾಗರ ಬೀಚಿನಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಶುಕ್ರವಾರ ರಾತ್ರಿ ಮೂವರ ಶವಗಳು ಪತ್ತೆಯಾಗಿದ್ದವು. ಶನಿವಾರ ಬೆಳಿಗ್ಗೆ ಮತ್ತೊಬ್ಬರ ಕೊನೆಯುಸಿರೆಳೆದರು. ನೀರಿನಲ್ಲಿ ಕಾಣೆಯಾಗಿದ್ದ ನಾಲ್ವರೂ ಬದುಕುಳಿದು, ಸುರಕ್ಷಿತವಾಗಿ ಮರಳಿದ್ದಾರೆ.

ಖಾನಾಪುರ ತಾಲ್ಲೂಕಿನ ಲೋಂಡಾ‌ ಗ್ರಾಮದ ಒಂದೇ ಕುಟುಂಬದ ಎಂಟು ಜನ ಸಂಬಂಧಿಗಳು ಅ.2ರಂದು ದಸರೆ ರಜೆ ಕಳೆಯಲು ಬೀಚಿಗೆ ತೆರಳಿದ್ದರು. ಬೋಟಿನಲ್ಲಿ ವಿಹಾರಕ್ಕೆಂದು ತೆರಳಿದ್ದಾಗ ಆಕಸ್ಮಿಕವಾಗಿ ಬೋಟ್ ಮುಳುಗಿತು.

ಲೋಂಡಾದ ಇರ್ಫಾನ್ ಇಸಾಕ್ ಕಿತ್ತೂರ (35), ಇವರ ಪತ್ನಿ ಫರಿನಾ ಇರ್ಫಾನ್ ಕಿತ್ತೂರ್ (31), ಇವರ ಪುತ್ರ ಇಬಾದ್ ಇರ್ಫಾನ್ ಕಿತ್ತೂರ್ (12) ಹಾಗೂ‌ ಇರ್ಫಾನ್ ಅವರ‌ ತಮ್ಮನ ಮಗ ಇಕ್ವಾನ್ ಇಮ್ರಾನ್ ಕಿತ್ತೂರ್ (15) ಜಲ ಸಮಾಧಿಯಾದವರು.

ADVERTISEMENT

ಸಮುದ್ರದಲ್ಲಿ ಕಾಣೆಯಾಗಿದ್ದ ಇಮ್ರಾನ್ ಇಸಾಕ್ ಕಿತ್ತೂರ್ (37), ಜಬಿನ್ ಇಮ್ರಾನ್ ಕಿತ್ತೂರ್ (32), ಇಜಾನ್ ಇಮ್ರಾನ್ ಕಿತ್ತೂರ್ (10), ಇಸ್ರಾ ಇಮ್ರಾನ್ ಕಿತ್ತೂರ (17) ಸುರಕ್ಷಿತವಾಗಿದ್ದಾರೆ.

ಮೃತದೇಹಗಳನ್ನು ಮಹಾರಾಷ್ಟ್ರದ ಸಾವಂತವಾಡಿ ಆಸ್ಪತ್ರೆಗೆ ತರಲಾಗಿದೆ. ಮರಣೋತ್ತರ ಪರೀಕ್ಷೆ ನಂತರಸಂಜೆ ಲೋಂಡಾಗೆ ಸಾಗಿಸಲಾಗುತ್ತದೆ ಎಂದು ಖಾನಾಪುರ ಪೊಲೀಸರು‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.