ADVERTISEMENT

ಮಲಪ್ರಭಾ: ಫೆ. 21 ಕಾಲುವೆ ನೀರು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:47 IST
Last Updated 18 ಫೆಬ್ರುವರಿ 2026, 7:47 IST
   

ಸವದತ್ತಿ: ಐಸಿಸಿ ಸಭೆಯ ನಿರ್ಣಯದಂತೆ ಮಲಪ್ರಭಾ ಜಲಾಶಯದ ವ್ಯಾಪ್ತಿಯ ಹಿಂಗಾರು ಹಂಗಾಮಿಗಾಗಿ ಅಂದಾಜು 80 ದಿನಗಳವರೆಗೆ ಎಲ್ಲ ಕಾಲುವೆಗಳ ಮೂಲಕ ಹರಿಸಲಾಗುತ್ತಿರುವ ನೀರನ್ನು ಈಗಾಗಲೇ ಪ್ರಕಟಗೊಂಡ ಫೆ. 15ಕ್ಕೆ ಸ್ಥಗಿತಗೊಳಿಸುವ ಬದಲಾಗಿ ಫೆ. 21ರವರೆಗೆ ಹರಿಸಿ ಅವತ್ತಿನ ದಿನ ಸ್ಥಗಿತಗೊಳಿಸಲಾಗುತ್ತದೆ.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಶಾಸಕರ ವಿನಂತಿ ಹಾಗೂ ಮಹಾಮಂಡಳದ ಅಧ್ಯಕ್ಷರೊಂದಿಗೆ ಚರ್ಚಿಸಿದಂತೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಬಾಂಧವರ ಹಿತದೃಷ್ಟಿಯಿಂದ ಮಲಪ್ರಭಾ ಜಲಾಶಯದ ಎಲ್ಲ ಕಾಲುವೆ ಮೂಲಕ ಕೃಷಿಗೆ ಹರಿಸಲಾಗುತ್ತಿರುವ ನೀರನ್ನು ಫೆ. 21 ರವರೆಗೆ ಮಾತ್ರ ಮುಂದುವರೆಸಿ ಅಂದು ಸ್ಥಗಿತಗೊಳಿಸಲಾಗುತ್ತಿದೆ.

ಫೆ. 17ರಂದು ಜಲಾಶಯದ ನೀರಿನ ಮಟ್ಟ 2061.20 ಅಡಿ ಇದ್ದು ಕೇವಲ 14.166 ಟಿಎಂಸಿ ಉಪಯುಕ್ತ ನೀರಿನ ಸಂಗ್ರಹವಿದೆ. ಈ ಲಭ್ಯವಿದ್ದ ನೀರನ್ನು ಮುಂಬರುವ ಜುಲೈ-2026 ರ ಅಂತ್ಯದ ವರೆಗೆ ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕಿದೆ.

ADVERTISEMENT

ಕಾರಣ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರು ಹಾಗೂ ಜನರು ಸಹಕರಿಸಬೇಕು ಎಂದು ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.