ADVERTISEMENT

ಮಮದಾಪುರ | ಅಪಘಾತದಲ್ಲಿ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:23 IST
Last Updated 25 ಫೆಬ್ರುವರಿ 2026, 6:23 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಗೆಟ್ಟಿ ಚಿತ್ರ

ಮಮದಾಪುರ: ಸಮೀಪದ ಕೊಳವಿ ಬಳಿ ರಸ್ತೆಬದಿ ಸೋಮವಾರ ರಾತ್ರಿ ನಿಲ್ಲಿಸಿದ್ದ ನೀರಿನ ಟ್ಯಾಂಕರ್‌ಗೆ ಹಿಂಬದಿಯಿಂದ ಬೈಕ್ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ  ಮೃತಪಟ್ಟಿದ್ದಾರೆ.

ADVERTISEMENT

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಪ್ರಕಾಶ ಶಂಕರೆಪ್ಪ ಬಡಿಗೇರ(51) ಮೃತರು.

ಎಂ.ಕೆ.ಹುಬ್ಬಳ್ಳಿಯಿಂದ ನೇಸರಗಿ, ಗೋಕಾಕ ಮಾರ್ಗವಾಗಿ ಕೊಣ್ಣೂರಿಗೆ ಅವರು ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.