ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಮಂಗಳವಾರ ನಡೆದ 10 ಕಿ.ಮೀ ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸಮೀರವಾಡಿಯ ವೆಂಕಟೇಶ ರಾಠೋಡ(32 ನಿ., 37 ಸೆ.) ಪ್ರಥಮ ಸ್ಥಾನ ಗಳಿಸಿದರು. ಧಾರವಾಡದ ಸಚಿನ ದೇವಪ್ಪನವರ(33 ನಿ., 9 ಸೆ.) ದ್ವಿತೀಯ ಮತ್ತು ಬೆಳಗಾವಿಯ ಬಬನ್ ಶಿಂಧೆ (34 ನಿ.) ತೃತೀಯ ಸ್ಥಾನ ಗಳಿಸಿದರು.
ಮಹಿಳೆಯರ ವಿಭಾಗದ 10 ಕಿ.ಮೀ ಮ್ಯಾರಥಾನ್‍ನಲ್ಲಿ ಬೆಳಗಾವಿಯ ನಕೋಶಾ ಮಂಗನಾಕರ (42 ನಿ.,15 ಸೆ.) ಪ್ರಥಮ, ಬೈಲಹೊಂಗಲ ತಾಲ್ಲೂಕಿನ ಮೇಕಲಮರ್ಡಿಯ ಶಿಲ್ಪಾ ಹೊಸಮನಿ (44 ನಿ., 53 ಸೆ.) ದ್ವಿತೀಯ ಮತ್ತು ಬೆಳಗಾವಿಯ ಶುಭಾಂಗಿ ಕಾಕತಿಕರ (45 ನಿ., 15 ಸೆ.) ತೃತೀಯ ಸ್ಥಾನ ಗಳಿಸಿದರು.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ರಾಣಿ ಚನ್ನಮ್ಮ ವೃತ್ತದಿಂದ ಆರಂಭಗೊಂಡ ಮ್ಯಾರಥಾನ್ ಅರಳಿಕಟ್ಟೆ, ನಿಚ್ಚಣಕಿ, ಅವರಾದಿ, ಮಲ್ಲಾಪುರ ಮಾರ್ಗವಾಗಿ ಸಾಗಿ ಕೋಟೆ ಆವರಣದಲ್ಲಿ ಮುಕ್ತಾಯವಾಯಿತು.
ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಸ್ಪರ್ಧೆಗೆ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಿರಿಯ ತರಬೇತುದಾರ ಸಂಜೀವಕುಮಾರ ನಾಯಕ, ಜಿ.ಎನ್. ಪಾಟೀಲ, ಬಸವರಾಜ ಜಕ್ಕನ್ನವರ, ಬಿ.ಎಸ್. ಪಾಟೀಲ, ಸಿ. ರಾಮರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.