ADVERTISEMENT

‘ಜಿತೊ’ದಿಂದ ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 13:13 IST
Last Updated 29 ಮಾರ್ಚ್ 2020, 13:13 IST
ಬೆಳಗಾವಿಯಲ್ಲಿ ಜಿತೊ ವತಿಯಿಂದ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳನ್ನು ಮನೋಜ ಸಂಚೇತಿ, ವಿಕ್ರಮ ಜೈನ, ಪ್ರಮೋದ ಪಾಟೀಲ, ಭಾರತಿ ಹರದಿ ವಿತರಿಸಿದರು
ಬೆಳಗಾವಿಯಲ್ಲಿ ಜಿತೊ ವತಿಯಿಂದ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳನ್ನು ಮನೋಜ ಸಂಚೇತಿ, ವಿಕ್ರಮ ಜೈನ, ಪ್ರಮೋದ ಪಾಟೀಲ, ಭಾರತಿ ಹರದಿ ವಿತರಿಸಿದರು   

ಬೆಳಗಾವಿ: ಕೊರೊನಾ ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ನಗರಪಾಲಿಕೆ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ಬಳಕೆಗಾಗಿ ಜಿತೊ (ಜೈನ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ) ಬೆಳಗಾವಿ ವಿಭಾಗದವರು 5ಸಾವಿರ ಮಾಸ್ಕ್‌ ಮತ್ತು ಸ್ಯಾನಿಟೈಸರಗಳನ್ನು ವಿತರಿಸಿದರು.

ಕೊಳೆಗೇರಿಗಳ ಜನರಿಗೂ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ನೀಡಿದರು. ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.

ವಿಭಾಗದ ಅಧ್ಯಕ್ಷ ಮನೋಜ ಸಂಚೇತಿ, ಕಾರ್ಯದರ್ಶಿ ವಿಕ್ರಮ ಜೈನ, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಹರದಿ, ರಜತ ಹರದಿ, ಸಂಜು ದೊಡ್ಡಣ್ಣವರ, ಮುಕೇಶ ಪೋರವಾಲ, ಪ್ರಮೋದ ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.