ADVERTISEMENT

ಉಚಗಾಂವ: ಬಿಜೆಪಿಯಿಂದ ಔಷಧಿ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 10:26 IST
Last Updated 21 ಮೇ 2020, 10:26 IST
ಬೆಳಗಾವಿ ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಬಿ. ಪಾಟೀಲ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪತಿ ಔಷಧಿ ವಿತರಿಸಲಾಯಿತು
ಬೆಳಗಾವಿ ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಬಿ. ಪಾಟೀಲ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪತಿ ಔಷಧಿ ವಿತರಿಸಲಾಯಿತು   

ಬೆಳಗಾವಿ: ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಬಿ. ಪಾಟೀಲ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪತಿ ಔಷಧಿ ವಿತರಿಸಲಾಯಿತು.

‘ಮಾರಕ ಕೊರೊನಾ ಹರಡುವುದನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ಸಂಚಾಲಕಿ ಡಾ.ಸೋನಾಲಿ ಸರ್ನೋಬತ್‌ ಮಾತನಾಡಿದರು.

ADVERTISEMENT

5ಸಾವಿರ ಕುಟುಂಬಗಳ ಮನೆ ಮನೆಗೆ ಔಷಧಿ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನೋದ ಪಾವಸೆ, ಮುಖಂಡರಾದ ಮಹೇಶ ಮೋಹಿತೆ, ಧನಂಜಯ ಜಾಧವ, ಪ್ರವೀಣ ದೇಸಾಯಿ, ಹೇಮಂತ ಪಾಟೀಲ, ಪ್ರವೀಣ ಪಾಟೀಲ, ಅರುಣ ಜಾಧವ, ಮಾರುತಿ ಖಾಂಡೇಕರ, ಚೇತನ ಪಾಟೀಲ, ರಾಜೇಶ ಪಾಟೀಲ, ಅಭಯ ಅವಲಕ್ಕಿ ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.