
ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಪಣಗುಂದಿ ಗ್ರಾಮದಲ್ಲಿ ಶನಿವಾರ ಮಾಕರ್ಂಡೇಯ ಮೀನುಗಾರರ ಸಹಕಾರ ಸಂಘ ಉದ್ಘಾಟನೆಯನ್ನು ಸತೀಶ ಜಾರಕಿಹೊಳಿ ನೇರವೇರಿಸಿದರು.
ಯಮಕನಮರಡಿ: ಮೀನುಗಾರ ಸಮುದಾಯದ ಆರ್ಥಿಕ ಬಲವರ್ಧನೆಗೆ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಪಣಗುತ್ತಿ ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಮಾರ್ಕಂಡೇಯ ಮೀನುಗಾರರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳು ಸಮುದಾಯದ ಕೊನೆಯ ವ್ಯಕ್ತಿಗೂ ತಲುಪಬೇಕು ಎಂಬ ಉದ್ದೇಶದಿಂದ ಇಂತಹ ಸಂಘಟನೆಗಳಿಗೆ ಸದಾ ಬೆಂಬಲ ನೀಡಲಾಗುವುದು. ಮೀನುಗಾರರ ಬದುಕು ಸುಧಾರಣೆಗೆ ಅಗತ್ಯವಿರುವ ಮೂಲಸೌಕರ್ಯ, ಸಾಲ ಸೌಲಭ್ಯ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದರು.
ಮೀನುಗಾರರಿಗೆ 125ಕ್ಕೂ ಹೆಚ್ಚು ಮನೆಗಳನ್ನು ನೀಡಲಾಗಿದೆ. ನದಿಯಲ್ಲಿ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಮೃತಪಟ್ಟ ಎರಡು ಕುಟುಂಬಗಳಿಗೆ 24ಗಂಟೆಯ ಒಳಗೆ ತಲಾ ₹10ಲಕ್ಷ ವಿತರಣೆ ಮಾಡಲಾಗಿದೆ. ಚುನಾವಣೆ 2 ವರ್ಷ ಇದೆ. ಈಗಿನಿಂದ ತಾಲೀಮು ಮಾಡಿದರೆ ಸಾಲದು ಇನ್ನು ದೂರ ಇದೆ. ಆವಾಗ ಉತ್ತರ ನೀಡಲು ಸಿದ್ದ ಇದ್ದೇವೆ ಎಂದು ಸಚಿವರು ಹೇಳಿದರು.
ಕರ್ನಾಟಕ ರಾಷ್ಟ್ರೀಯ ಗೋಸಂರಕ್ಷಣಾ ಕೋಶದ ರಾಜ್ಯ ಅಧ್ಯಕ್ಷ ಕದಸಿದ್ದೇಶ್ವರ ಸ್ವಾಮೀಜಿ, ಚಿಕ್ಕಲದಿನ್ನಿಯ ಶಿವಾನಂದ ಸ್ವಾಮೀಜಿ, ಬೆಳಗಾವಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಶ ಕೊಪ್ಪದ, ರಂಗನಾಥ ಶಿಂಧೆ, ಅಬ್ಬುಲರಜಾಕ ಮುಲ್ಲಾ, ಸಂಘದ ಅಧ್ಯಕ್ಷ ನಿಂಗಪ್ಪ ಕೊಚ್ಚರಗಿ, ಉಪಾಧ್ಯಕ್ಷ ಸಿದ್ದಪ್ಪಾ ಹಳಬರ, ಭೀಮಪ್ಪಾ ಪೂಜೇರಿ, ವಿರುಪಾಕ್ಷಿ ಕೊಚ್ಚರಗಿ, ಸಿದ್ದಪ್ಪಾ ನಾಯಿಕ, ಸಿದ್ದಪ್ಪಾ ಹಳಬರ, ಬಸವರಾಜ ಮೂಕನವರ, ಬಸಪ್ಪ ಧನದಾರ, ಗಂಗಪ್ಪಾ ಧನದಾರ, ಬಸಪ್ಪ ಗಡಕರಿ, ಹಣಮಂತ ತುಬಾಕಿ, ಯಲ್ಲಪ್ಪಾ ಧನವರ, ರಾಜು ಅಂಕಲಗಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.