ADVERTISEMENT

ಜ.17ರಂದು ಬೈಲಹೊಂಗಲದಲ್ಲಿ ಹಿಂದೂ ಸಮಾವೇಶ: ಬೃಹತ್ ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 4:33 IST
Last Updated 22 ಡಿಸೆಂಬರ್ 2025, 4:33 IST
ಬೈಲಹೊಂಗಲ ವಿಜಯಸೋಶಿಯಲ್ ಕ್ಲಬ್ ಆವರಣದಲ್ಲಿ ಭಾನುವಾರ ಸಮಸ್ತ ಹಿಂದೂ ಬಾಂಧವರಿಂದ ಹಿಂದೂ ಸಮಾವೇಶ ಆಯೋಜನೆ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಬೈಲಹೊಂಗಲ ವಿಜಯಸೋಶಿಯಲ್ ಕ್ಲಬ್ ಆವರಣದಲ್ಲಿ ಭಾನುವಾರ ಸಮಸ್ತ ಹಿಂದೂ ಬಾಂಧವರಿಂದ ಹಿಂದೂ ಸಮಾವೇಶ ಆಯೋಜನೆ ಕುರಿತು ಪೂರ್ವಭಾವಿ ಸಭೆ ನಡೆಯಿತು.   

ಬೈಲಹೊಂಗಲ: ಪಟ್ಟಣದ ವಿಜಯಸೋಶಿಯಲ್ ಕ್ಲಬ್ ಆವರಣದಲ್ಲಿ ಹಿಂದೂ ಸಮಾವೇಶ ಆಯೋಜನೆ ಕುರಿತು ಭಾನುವಾರ ಸುಧೀರ್ಘ ಚರ್ಚೆ ನಡೆಯಿತು.

ಹಲವು ಸುತ್ತಿನ ಮಾತುಕತೆ ನಡೆಸಿ ಯಾವುದೇ ರಾಜಕೀಯ ರಹಿತವಾಗಿ, ಪಕ್ಷಬೇಧವಿಲ್ಲದೆ, ಜಾತಿ, ಮತ, ಪಂಗಡ ಇಲ್ಲದೇ ಸಮಸ್ತ ಹಿಂದೂ ಬಾಂದವರಿಂದ ಜ.17ರಂದು ಸಂಜೆ 5.30ಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಣಯ ಕೈಕೊಳ್ಳಲಾಯಿತು. ಅಂದು ಸಂಜೆ 4ಕ್ಕೆ ಬೆಳಗಾವಿ ರಸ್ತೆಯ ವೀರರಾಣಿ ಕಿತ್ತೂರು ಚನ್ನಮ್ಮ ಆಶ್ವಾರೂಢ ಮೂರ್ತಿ ಸ್ಥಳದಿಂದ ಬೃಹತ್ ಶೋಭಾಯಾತ್ರೆ, ಪ್ರಮುಖ ಬೀದಿಗಳಲ್ಲಿ ಬೃಹತ್ ಬೈಕ್ ರ್ರ್ಯಾಲಿ ನಡೆಸಲು ನಿರ್ಧರಿಸಲಾಯಿತು.

ಸಮಾವೇಶಕ್ಕೆ ನಾಡಿನ ಹಲವಾರು ಮಠಾಧೀಶರು, ಗಣ್ಯರನ್ನು ಆಹ್ವಾನಿಸಲು ಚರ್ಚಿಸಲಾಯಿತು. ಸಮಾವೇಶಕ್ಕೆ ಸಿದ್ಧತೆ, ಸಂಘಟನೆ, ಪ್ರಚಾರ ವ್ಯವಸ್ಥೆ, ಸಮಾವೇಶಕ್ಕೆ ಬರುವ ನಾಗರಿಕರಿಗೆ ತೊಂದರೆ ಆಗದ ರೀತಿಯಲ್ಲಿ ಬಸ್ ವ್ಯವಸ್ಥೆ, ಕುಡಿಯಲು ನೀರು, ಊಟೋಪಚಾರ, ಸ್ವಚ್ಚತೆ, ಬಿತ್ತಿ ಪತ್ರ, ಬ್ಯಾನರ್, ಕಟೌಟ್ ಅಳವಡಿಕೆ, ಸಮರ್ಪಕ ಧ್ವನಿವರ್ಧಕ ವ್ಯವಸ್ಥೆ, ಆಸನಗಳ ವ್ಯವಸ್ಥೆ, ಸಮಾವೇಶಕ್ಕೆ ಅನುಮತಿ ಸೇರಿದಂತೆ ಹಲವಾರು ಸಮಿತಿಗಳನ್ನು ರಚಿಸಿ ಪ್ರತಿಯೊಬ್ಬರಿಗೂ ಜವಾಬ್ದಾರಿವಹಿಸಿ ಒಟ್ಟಾರೆಯಾಗಿ ಸುವ್ಯವಸ್ಥಿತವಾಗಿ ಸಮಾವೇಶ ನಡೆಸಲು ಅಗತ್ಯ ಸಲಹೆ, ಸೂಚನೆಗಳನ್ನು ಸಂಗ್ರಹಿಸಲಾಯಿತು.

ADVERTISEMENT

ವಿಭಾಗ ಪ್ರಚಾರಕ ಸತೀಶ್ ಜಿ, ಜಿಲ್ಲಾ ಕಾರ್ಯವಾಹಾರ ಮಾರುತಿ ಜೀ, ವಿಶ್ವಹಿಂದೂ ಪರಿಷದ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಉದ್ಯೆಮಿ ವಿಜಯ ಮೆಟಗುಡ್ಡ ಮಾತನಾಡಿದರು.

ಬಿಜೆಪಿ ಮಾಧ್ಯಮ ವಕ್ತಾರ ಎಫ್.ಎಸ್.ಸಿದ್ದನಗೌಡರ, ಮುಖಂಡರಾದ ಮಡಿವಾಳಪ್ಪ ಹೋಟಿ, ವಿರುಪಾಕ್ಷ ಕೋರಿಮಠ, ಮಾಜಿ ಸೈನಿಕರಾದ ಗಂಗಪ್ಪ ಗುಗ್ಗರಿ, ಮುಶೆಪ್ಪ ಉಪ್ಪಾರ, ಮಲ್ಲಿಕಾರ್ಜುನ ಉಪ್ಪಿನ ಮಹಾಂತೇಶ ಜಿಗಜಿನ್ನಿ, ಅಶೋಕ ಗುಂಡ್ಲೂರ, ಸಚಿನ ಕಡಿ, ಸುಭಾಷ ತುರಮರಿ, ಸುಭಾಷ ಬಾಗೇವಾಡಿ, ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ನಿಂಗಪ್ಪ ಚೌಡನ್ನವರ, ಮಹಾಂತೇಶ ಹೊಂಗಲ, ಮೀನಾಕ್ಷಿ ಕುಡಸೋಮಣ್ಣವರ, ಮಧು ಬೆಳಗಾವಿ, ಮಹಾದೇವಿ ಉಪ್ಪಿನ, ನಾರಾಯಣ ನಲವಡೆ, ದಯಾನಂದ ಗೆಜ್ಜಿ, ಸಚಿನ ಚೀಲದ, ಬಸವರಾಜ ದೊಡಮನಿ, ಮಲ್ಲಮ್ಮನ ಬೆಳವಡಿ, ದೊಡವಾಡ, ಹೊಸೂರ, ಮುರಗೋಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.