ಮರಾಠಿಗರಿಂದ ಹೋಳಿ
ಬೆಳಗಾವಿ: ನಗರದ ಚವಾಟ ಗಲ್ಲಿಯಲ್ಲಿ ಶುಕ್ರವಾರ ಹೋಳಿ ಹಬ್ಬದ ಸಂದರ್ಭದಲ್ಲಿ ‘ಜೈ ಜೈ ಮಹಾರಾಷ್ಟ್ರ ಮಾಝಾ (ನನ್ನ ಮಹಾರಾಷ್ಟ್ರಕ್ಕೆ ಜಯವಾಗಲಿ)’ ಎಂಬ ಮರಾಠಿ ಹಾಡಿಗೆ ಯುವಕರ ದಂಡು ಕುಣಿದು ಕುಪ್ಪಳಿಸಿದೆ.
ಚವಾಟ ಗಲ್ಲಿಯಲ್ಲಿರುವ ಮಹಾರಾಷ್ಟ್ರ ಏಕೀಕಣ ಸಮಿತಿ (ಎಂಇಎಸ್) ನಾಯಕರೇ ಆಯೋಜಿಸಿದ ಈ ಹೋಳಿ ಹಬ್ಬದ ಸಂಭ್ರಮದಲ್ಲಿ ನಾಡದ್ರೋಹದ ಕೆಲಸ ನಡೆದಿದೆ. ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ನಡೆದ ಆಚರಣೆ ವೇಳೆ ಡಿಜೆ ಸೌಂಡ್ ಸಿಸ್ಟಮ್ ಬಳಸಿ ಇದೇ ಹಾಡನ್ನು ಪದೇಪದೇ ಕೇಳಿಸಲಾಗಿದೆ. ಅದಕ್ಕೆ ತಕ್ಕಂತೆ ಯುವಕ– ಯುವತಿಯರು ಕುಣಿದಿದ್ದಾರೆ. ಶನಿವಾರ ಇದರ ವಿಡಿಯೊಗಳು ಹೊರಗೆ ಬಂದ ಮೇಲೆಯೇ ವಿಷಯ ಗೊತ್ತಾಗಿದೆ.
‘ಮಹಾರಾಷ್ಟ್ರದಿಂದಲೇ ಕರೆಸಲಾದ ವೈಭವ್ ಸೌಂಡ್ಸ್ ಎಂಬ ತಂಡ ಈ ಗೀತೆ ಪ್ರಸಾರ ಮಾಡಿದೆ. ಗೀತೆಯನ್ನು ಉದ್ದೇಶಪೂರ್ವಕವಾಗಿ ಹಾಕಿ, ಕನ್ನಡಿಗರನ್ನು ಕೆಣಕಲಾಗಿದೆ. ಸ್ಥಳದಲ್ಲಿದ್ದ ಪೊಲೀಸರೂ ಇದನ್ನು ತಡೆದಿಲ್ಲ. ಈವರೆಗೆ ಸ್ವಯಂಪ್ರೇರಿತ ದೂರು ಕೂಡ ದಾಖಲಿಸಿಕೊಂಡಿಲ್ಲ. ಇದು ಖಂಡನೀಯ’ ಎಂದು ಹೋರಾಟಗಾರ ವಾಜೀದ್ ಹಿರೇಕೋಡಿ ಕಿಡಿ ಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.