ಬೆಳಗಾವಿ: ನಗರದಾದ್ಯಂತ ಗುರುವಾರ ಮುಂಜಾನೆ ದಟ್ಟ ಮಂಜು ಆವರಿಸಿತ್ತು. ಇದರಿಂದಾಗಿ ಬೆಳಗಾವಿಯು ‘ಮಂಜುಗಾವಿ’ಯಂತಾಗಿತ್ತು!
ಸಮೀಪದಲ್ಲಿ ಇರುವವರೂ ಕಾಣಿಸದಷ್ಟು ರೀತಿಯಲ್ಲಿ ಮಂಜು ಸುರಿಯುತ್ತಿತ್ತು. ಇದರಿಂದಾಗಿ ವಾಹನಗಳು ದೀಪ ಹಾಕಿಕೊಂಡು ಸಂಚರಿಸುತ್ತಿದ್ದುದು ಕಂಡು ಬಂತು. ಭಾರಿ ಚಳಿಯ ವಾತಾವರಣ ಸೃಷ್ಟಿಯಾಗಿತ್ತು. ಬೆಳಿಗ್ಗೆ 8 ಗಂಟೆಯಾದರೂ ತಿಳಿಯಾಗಿರಲಿಲ್ಲ. ಮೋಡಗಳ ಮರೆಯಿಂದ ಮಂಜನ್ನು ಸೀಳಿಕೊಂಡು ಹೊರಬರಲು ಸೂರ್ಯನ ಕಿರಣಗಳು ತವಕಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಾಣಸಿಕ್ಕವು. ಇದು ನೋಡುಗರಿಗೆ ಮುದ ನೀಡಿತು.
ಮಧ್ಯಾಹ್ನವಾಗುತ್ತಿದ್ದಂತೆಯೇ ಸುಡು ಬಿಸಿಲಿನ ವಾತಾವರಣವಿತ್ತು. ಸಂಜೆ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.