
ಪ್ರಜಾವಾಣಿ ವಾರ್ತೆತೊಗರಿ
ಬೆಳಗಾವಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಜಿಲ್ಲೆಯಲ್ಲಿ ಏಳು ಕೇಂದ್ರಗಳನ್ನು ಆರಂಭಿಸಲಾಗಿದೆ.
ಅಥಣಿ ತಾಲ್ಲೂಕಿನ ಕಟಗೇರಿ, ಕನ್ನಾಳ, ತೆಲಸಂಗ, ಕೊಟ್ಟಲಗಿ, ಕಕಮರಿ, ರಾಮದುರ್ಗ ತಾಲ್ಲೂಕಿನ ಹುಲಕುಂದ ಪಿಕೆಪಿಎಸ್‌ಗಳು ಹಾಗೂ ರಾಮದುರ್ಗದ ಟಿಎಪಿಸಿಎಂಎಸ್‌ನಲ್ಲಿ ಕೇಂದ್ರ ಆರಂಭವಾಗಿವೆ.
ತೊಗರಿ ಕ್ವಿಂಟಲ್‌ಗೆ ₹8,000 ದರವಿದೆ. ಡಿ.18ರಿಂದ 80 ದಿನಗಳವರೆಗೆ ನೋಂದಣಿ ಅವಧಿ ಮತ್ತು 90 ದಿನಗಳವರೆಗೆ ಖರೀದಿ ಅವಧಿ ಇದೆ. ಮಾಹಿತಿಗೆ 9449864471 ಸಂಪರ್ಕಿಸಬಹುದು ಎಂದು ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಮಹಾದೇವಪ್ಪ ಚಬನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.