ADVERTISEMENT

‘ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ’

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:17 IST
Last Updated 8 ಅಕ್ಟೋಬರ್ 2024, 16:17 IST
ಮಹಾಂತ ಪ್ರಭು ಸ್ವಾಮೀಜಿ
ಮಹಾಂತ ಪ್ರಭು ಸ್ವಾಮೀಜಿ   

ಮೂಡಲಗಿ: ‘ಮನುಷ್ಯ ಬರುವಾಗ ಬರಿಗೈಲಿ ಬರುವನು, ಹೋಗುವಾಗ ಬರಿಗೈಲಿ ಹೋಗುವನು. ಬದುಕಿದ್ದಾಗ ಆತ್ಮಜ್ಞಾನ ಪಡೆದುಕೊಳ್ಳಬೇಕು’ ಎಂದು ಶೇಗುಣಸಿಯ ವೀರಕ್ತಮಠದ ಮಹಾಂತ ಪ್ರಭು ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಲ್ಲೋಳಿಯಲ್ಲಿ ಜರುಗುತ್ತಿರುವ 41ನೇ ವರ್ಷದ ನವರಾತ್ರಿ ಉತ್ಸವದ 6ನೇ ದಿನವಾದ ಮಂಗಳವಾರ ದೇವಿ ಪುರಾಣ ಮತ್ತು ಉಪದೇಶಾಮೃತದಲ್ಲಿ ಮಾತನಾಡಿದ ಅವರು, ‘ಮನುಷ್ಯ ಇರುವಷ್ಟು ದಿನ ಹೇಗೆ ಬದುಕಿದನು ಎನ್ನುವುದೇ ಅಂತಿಮ ಸತ್ಯ’ ಎಂದರು.

‘ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು. ಪರಂಪರೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಕಲ್ಲೋಳಿಯಲ್ಲಿ ನವರಾತ್ರಿಯನ್ನು ಅತ್ಯಂತ ಭಕ್ತಿಭಾವದಲ್ಲಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ಹುಲ್ಯಾಳ–ಜಮಖಂಡಿಯ ಸಿದ್ಧ ಓಂಕಾರ ಆಶ್ರಮದ ಮಾತೋಶ್ರೀ ಜಯಶ್ರೀದೇವಿ ಅವರು ದೇವಿ ಪುರಾಣದಲ್ಲಿ ಜಗನ್ಮಾಥೆಯ ಮಹಿಮೆ ಬಗ್ಗೆ ಮಾತನಾಡಿದರು.

ನವರಾತ್ರಿ ಉತ್ಸವ ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷ ರಾವಸಾಹೇಬ ಬೆಳಕೂಡ, ಸಿದ್ದು ಮಾಯನ್ನವರ, ಭೀಮಶೆಪ್ಪ ಮಾಯನ್ನವರ, ಸಮಿತಿ ಸದಸ್ಯರಾದ ಭಗವಂತ ಪತ್ತಾರ, ಶೀತಲ ಅಥಣಿ, ಉಮೇಶ ಪಾಟೀಲ, ಶಿವಾನಂದ ಹೆಬ್ಬಾಳ, ರಾಮಪ್ಪ ಬೆಳಕೂಡ, ಅಶೋಕ ಆಡಿನವರ, ಪ್ರಭು ಕಡಾಡಿ, ಕೆಂಪಣ್ಣ ಮಕ್ಕಳಗೇರಿ, ಸುರೇಶ ಬಡಿಗೇರ, ಹಣಮಂತ ಕೌಜಲಗಿ, ಸಿದ್ದು ಕಲ್ಲೋಳಿ, ಗಣಪತಿ ಸಂಗಟಿ ಇದ್ದರು.

ಸೇರಿದ ಭಕ್ತರು ಅನ್ನಸಂರ್ಪನೆಯಲ್ಲಿ ಭಾಗವಹಿಸಿದ್ದರು.

ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ನವಾರಾತ್ರಿ ಉತ್ಸವದ 6ನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಸೇರಿದ ಜನರ ನೋಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.