ADVERTISEMENT

ಮೂಡಲಗಿ: ಗಮನಸೆಳೆದ ತೆರಬಂಡಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 13:08 IST
Last Updated 10 ಮೇ 2025, 13:08 IST
ಮೂಡಲಗಿ ಶಿವಬೋಧರಂಗ ಜಾ‌ತ್ರೆ ಅಂಗವಾಗಿ ಏರ್ಪಡಿಸಿದ್ದ ತೆರಬಂಡಿ ಸ್ಪರ್ಧೆಯಲ್ಲಿ ವಿಜೇತವಾದ ಇಂಗಳಗಿ ಮಂಜುನಾಥ ಎತ್ತುಗಳು
ಮೂಡಲಗಿ ಶಿವಬೋಧರಂಗ ಜಾ‌ತ್ರೆ ಅಂಗವಾಗಿ ಏರ್ಪಡಿಸಿದ್ದ ತೆರಬಂಡಿ ಸ್ಪರ್ಧೆಯಲ್ಲಿ ವಿಜೇತವಾದ ಇಂಗಳಗಿ ಮಂಜುನಾಥ ಎತ್ತುಗಳು   

ಮೂಡಲಗಿ: ಮೂಡಲಗಿಯ ಶಿವಬೋಧರಂಗ ಸ್ವಾಮಿ ಪುಣ್ಯತಿಥಿ, ಜಾತ್ರೆ ಅಂಗವಾಗಿ ಜಾತ್ರಾ ಸಮಿತಿಯವರು ಸ್ಥಳೀಯ ಎಸ್‌ಎಸ್‌ಆರ್ ಕಾಲೇಜು ಕ್ರೀಡಾ ಮೈದಾನದಲ್ಲಿ ಏರ್ಪಡಿಸಿದ್ದ ತೆರಬಂಡಿ ಶರ್ತುದಲ್ಲಿ ಇಂಗಳಗಿಯ ಮಂಜುನಾಥ ಎತ್ತುಗಳು ಮೊದಲ ಸ್ಥಾನ, ಶಿರೋಳದ ಮಹಾಲಿಂಗೇಶ್ವರ ಎತ್ತುಗಳು  ದ್ವಿತೀಯ ಹಾಗೂ ಶಿರಹಟ್ಟಿಯ ಘಟಲೇಶ್ವರ ಎತ್ತುಗಳು ತೃತೀಯ ಸ್ಥಾನ ಪಡೆದವು. ಕ್ರಮವಾಗಿ ₹50 ಸಾವಿರ, ₹40 ಸಾವಿರ, ₹30 ಸಾವಿರ ನಗದು ಬಹುಮಾನ ನೀಡಲಾಯಿತು.

ಬಿಸನಾಳದ ಬನ್ನಮ್ಮದೇವಿ ಎತ್ತುಗಳು, ಇಟ್ನಾಳದ ದುರ್ಗಾದವೇವಿ ಎತ್ತುಗಳು, ನಂದಗಾಂವದ ರೇಣುಕಾದೇವಿ ಎತ್ತುಗಳು, ಉದಗಟ್ಟಿಯ ಉದ್ದಮ್ಮದೇವಿ ಎತ್ತುಗಳು ಗಮನ ಸೆಳೆದವು.

ಬೆಳಗಾವಿ ಸೇರಿದಂತೆ ಬಾಗಲಕೋಟ, ವಿಜಯಪುರ, ಧಾರವಾಡ ಜಿಲ್ಲೆಗಳಿಂದ ದಷ್ಟಪುಷ್ಟ, ಆಕರ್ಷಕವಾದ 22 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿದ್ದವು. ತೆರಬಂಡಿ ಟ್ರ್ಯಾಕ್‌ನಲ್ಲಿ ಎತ್ತುಗಳು ಓಟ ಕಿತ್ತು ಓಡುವ ದೃಶ್ಯಗಳು ರೋಮಾಂಚನಗೊಳಿಸಿದವು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.