ADVERTISEMENT

ಮಹಡಿಯಿಂದ ಬಿದ್ದು ಬಾಲಕಿ ಸಾವು: ಅಂತ್ಯಸಂಸ್ಕಾರಕ್ಕೆ ನೆರವಾದ ಮುಸ್ಲಿಂ ಮುಖಂಡರು

ಆಸ್ಪತ್ರೆ ವೆಚ್ಚ ಭರಿಸಿದ್ದ ಮುಸ್ಲಿಂ ಮುಕಂಡರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 9:48 IST
Last Updated 16 ಸೆಪ್ಟೆಂಬರ್ 2022, 9:48 IST
ವಿದ್ಯಾಶ್ರೀ ಹೆಗಡೆ
ವಿದ್ಯಾಶ್ರೀ ಹೆಗಡೆ   

ಬೆಳಗಾವಿ: ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಬಾಲಕಿ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.

ಉಡುಪಿ ಮೂಲದವರಾದ, ಕೆಲ ವರ್ಷಗಳಿಂದ ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ವಾಸವಾಗಿದ್ದ ವಿದ್ಯಾಶ್ರೀ ಹೆಗಡೆ (10) ಮೃತಪಟ್ಟ ಬಾಲಕಿ. ಗುರುವಾರ ಬೆಳಿಗ್ಗೆ ಮಹಡಿ ಮೇಲೆ ಹತ್ತಿ ಹೂವು ಕೀಳಲು ಹೋದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಳು. ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಇಲ್ಲಿನ ಮುಸ್ಲಿಂ ಸಮುದಾಯದ ಕೆಲವರು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ಸೇರಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಳು.

ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು: ನಗರದಲ್ಲಿ ಬಾಲಕಿ ತನ್ನ ತಾಯಿ ಜತೆಗೆ ಮಾತ್ರ ವಾಸವಾಗಿದ್ದಳು. ಆಸ್ಪತ್ರೆ ವೆಚ್ಛ ಭರಿಸಲು ತಾಯಿಗೆ ಸಾಧ್ಯವಾಗದ ಕಾರಣ, ವೀರಭದ್ರೇಶ್ವರ ನಗರದ ಕೆಲ ಮುಸ್ಲಿಂ ಮುಖಂಡರೇ ವೆಚ್ಚ ಭರಿಸಿದರು. ನಂತರ ಬಾಲಕಿ ಶವವನ್ನು ಮನೆಗೆ ತಂದು, ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಿದರು.

ADVERTISEMENT

ಪಾಲಿಕೆ ಸದಸ್ಯರಾದ ಬಾಬಾಜಾನ್ ಮತವಾಲೆ, ಮುಖಂಡರಾದ ರಿಯಾಜ್ ಕಿಲ್ಲೇದಾರ್, ಇಮ್ರಾನ್ ಪತ್ತೆಖಾನ್, ಶಾಹೀದ್ ಪಠಾಣ, ಸಲ್ಮಾನ್ ಮಂಗಲಕಟ್ಟಿ, ರಾಜು ಶೇಖ್ ಭಾಗಿ, ಶಾಂತಕುಮಾರ್‌ ಸೇರಿಕೊಂಡು ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಬಾಲಕಿಯ ಅಂತ್ಯಕ್ರಿಯೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.