ಪ್ರೀತಂ ಪಾಟೀಲ
ಬೆಳಗಾವಿ: ಮಹಾರಾಷ್ಟ್ರದ ಎನ್‌ಸಿಪಿ ನಾಯಕ ರಾಜೇಂದ್ರ ಹಗವಣೆ ಅವರ ಸೊಸೆ ವೈಷ್ಣವಿ (23) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯದ ಮಾಜಿ ಸಚಿವ ವೀರಕುಮಾರ ಪಾಟೀಲ ಅವರ ಪುತ್ರ ಪ್ರೀತಂ ಪಾಟೀಲ ಅವರನ್ನು ಮಹಾರಾಷ್ಟ್ರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ನಿವಾಸಿಯಾದ ಪ್ರೀತಂ ಪಾಟೀಲ ಅವರನ್ನು ಬಂಧಿಸಿ, ಮಹಾರಾಷ್ಟ್ರದ ಪುಣೆ ಜೈಲಿಗೆ ಕರೆದೊಯ್ಯಲಾಗಿದೆ.
ವೈಷ್ಣವಿ ಹಗವಣೆ ಅವರ ಕೊಲೆ ಆರೋಪ ಎದುರಿಸುತ್ತಿರುವ, ಅವರ ಮಾವ ರಾಜೇಂದ್ರ ಹಗವನೆ ಹಾಗೂ ಮೈದುನ ಸುಶೀಲ್ ಅವರಿಗೆ ಆಶ್ರಯ ಹಾಗೂ ಆರ್ಥಿಕ ಸಹಾಯ ನೀಡಿದ ಆರೋಪದಡಿ ಪ್ರೀತಂ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವೈಷ್ಣವಿ ಕೊಲೆ ಪ್ರಕರಣ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದೆ. ವರದಕ್ಷಿಣೆ ಆಸೆಗಾಗಿ ಪತಿ ಮನೆಯವರು ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.